ನವದೆಹಲಿ : ವಾರ್ಷಿಕ 20 ಲಕ್ಷ ರೂ. ಒಳಗೆ ವ್ಯವಹಾರ ನಡೆಸುವವರಿಗೆ ತೆರಿಗೆ ಹೇರದಿರಲು ಜಿಎಸ್ಟಿ ನಿರ್ಧರಿಸಿದ್ದು, ಎಲ್ಲ ರೀತಿಯ ಸೆಸ್ಗಳನ್ನು ಜಿಎಸ್ಟಿಯಲ್ಲೇ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ.
ಏಪ್ರಿಲ್ 1 ರಿಂದ ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪದ್ಧತಿಯಡಿ ತೆರಿಗೆ ಮಿತಿಯನ್ನು 20 ಲಕ್ಷ ರೂ.ಗೆ ನಿಗದಿಪಡಿಸುವಂತೆ ಜಿಎಸ್ಟಿ ಮಂಡಳಿ ನಿರ್ಧರಿಸಿದೆ.
ಸೆಪ್ಟೆಂಬರ್ 23 ರಂದು ಜಿಎಸ್ಟಿ ಮಂಡಳಿಯ ಮತ್ತೊಂದು ಸಭೆಯ ನಡೆಯಲಿದ್ದು ಅಂದು ವಿನಾಯಿತಿಗೆ ಸಂಬಂಧಿಸಿದ ಕರಡು ನಿಯಮಗಳನ್ನು ಅಂತಿಮಗೊಳಿಸಲಾಗುತ್ತದೆ. ಇನ್ನು ಅಕ್ಟೋಬರ್ 17 ರಿಂದ 3 ದಿನಗಳ ಕಾಲ ನಡೆಯುವ ಸಭೆಯಲ್ಲಿ ಜಿಎಸ್ಟಿ ದರ ಹಾಗೂ ತೆರಿಗೆ ಸ್ತರಗಳನ್ನು ಅಂತಿಮವಾಗಿ ನಿರ್ಧರಿಸಿಲಾಗುತ್ತದೆ ಎನ್ನಲಾಗಿದೆ.
ಇತರೆ ರಾಜ್ಯಗಳಲ್ಲಿ 20 ಲಕ್ಷ ರೂ.ವರೆಗಿನ ವ್ಯವಹಾರಕ್ಕೆ ಜಿಎಸ್ಟಿ ಇರುವುದಿಲ್ಲ. ಆದರೆ ಈಶಾನ್ಯ ಮತ್ತು ಗಿರಿಧಾಮ ರಾಜ್ಯಗಳಲ್ಲಿ ವಾರ್ಷಿಕ ಮಿತಿ 10 ರೂ. ಗೆ ನಿರ್ಧರಿಸಲಾಗಿದೆ. ಇನ್ನು ವಾರ್ಷಿಕವಾಗಿ 1.5 ಕೋಟಿ ರೂ. ವರೆಗೆ ವಹಿವಾಟು ನಡೆಸುವವರ ಕುರಿತು ಆ ಹಕ್ಕನ್ನು ಆಯಾ ರಾಜ್ಯಗಳಿಗೆ ಬಿಡಲಾಗುವುದು. ಇದಕ್ಕಿಂತಲೂ ಹೆಚ್ಚಿನ ವಹಿವಾಟು ನಡೆಸುವವರನ್ನು ಕೇಂದ್ರ ಅಥವಾ ರಾಜ್ಯ ಯಾವುದಾದರೊಂದರ ವ್ಯಾಪ್ತಿಗೆ ತರುವಂತೆ ಮುಂದಿನ ದಿನಗಳಲ್ಲಿ ಚೌಕಟ್ಟನ್ನು ಕುರಿತು ಯೋಚಿಸಲಾಗುವುದು. ಇನ್ನು ಜಿಎಸ್ಟಿ ಜಾರಿಯಿಂದಾಗಿ ರಾಜ್ಯಗಳು ನಷ್ಟ ಅನುಭವಿಸಿದರೆ ಅದನ್ನು ಕೇಂದ್ರ ಸರ್ಕಾರ ಭರಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಮುಂದಿನ ಸಭೆಗಳಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.