ಟೊರೊಂಟೋ: ಕೆನಡಾದ ೧೫೦ನೇ ವಾರ್ಷಿಕೋತ್ಸವದ ಅಂಗವಾಗಿ ಕ್ಯಾನಡಾದ ವಿಜ್ಞಾನಿಗಳು ಮಾನವನ ಕೂದಲಿನ ನೂರನೇ ಒಂದರಷ್ಟು ಸಣ್ಣ ಗಾತ್ರದ ಧ್ವಜ ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಕೆನಡಾದ ವಾಟರ್ಲೂ ವಿಶ್ವವಿದ್ಯಾಲಯದಲ್ಲಿ ಇನ್ಸ್ಟಿಟ್ಯೂಟ್ ಫಾರ್ ಕ್ವಾಂಟಮ್ ಕಂಪ್ಯೂಟಿಂಗ್ ಐಕ್ಯೂಸಿ)ಗೆ ೧.೧೭೮ ಮೈಕ್ರೋ ಮೀಟರ್ ಅಳತೆಯ ಧ್ವಜದ ಉದ್ಘಾಟನಾ ಪ್ರಶಸ್ತಿಯನ್ನು ವಿತರಿಸಿದೆ.
ಈ ಧ್ವಜವನ್ನು ಕೇವಲ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ (ಮೈಕ್ರೋಸ್ಕೊಪ್) ಸಹಾಯದಿಂದಲೇ ವೀಕ್ಷಿಸಬಹುದಾಗುದೆ ಎನ್ನಲಾಗಿದೆ.
ನ್ಯಾನೋ ಫ್ಯಾಬ್ರಿಕೇಶನ್ ವಿಧಾನದ ಇಂಜಿನಿಯರ್ ನಥನ್ ನೆಲ್ಸನ್ ಫಿಜ್ಪ್ಯಾಟ್ರಿಕ್ ಹಾಗೂ ಫ್ಯಾಕಲಗಟಿ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿ ನತಾಲಿ ಪ್ರಿಸ್ಲಿಂಜರ್ ಪಿಂಚಿನ್ ಅವರು ಸಿಲಿಕಾನ್ ವೇಫರ್ ಮೇಲೆ ಕ್ಯಾನಡಾದ 150ನೇ ವಾರ್ಷಿಕೋತ್ಸವ ಲೋಗೋ ಹೊಂದಿದ ಈ ಧ್ವಜವನ್ನು ರಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.