ನವದೆಹಲಿ: ರಿಯೋ ಡಿ ಜನೈರೋದ ರಿಯೋ ಕ್ರೀಡಾಗ್ರಾಮದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಟಿ-42ರ ಹೈಜಂಪ್ ಬಂಗಾರ ಪದಕ ವಿಜೇತ ಮರಿಯಪ್ಪನ್ ತಂಗವೇಲು ಮತ್ತು ಕಂಚಿನ ಪದಕ ವಿಜೇತ ವರುಣ್ ಭಾಟಿಯವರ ಸಾಧನೆಯನ್ನು ಇಡೀ ದೇಶ ಕೊಂಡಾಡಿದ್ದು, ಪ್ರಧಾನಿ ಟ್ವೀಟ್ ಮೂಲಕ ಕ್ರೀಡಾಳುಗಳನ್ನು ಶ್ಲಾಘಿಸುವ ಮೂಲಕ ಸ್ಫೂರ್ತಿ ತುಂಬಿದರು.
‘ಭಾರತ ಸಂತೋಷಭರಿತವಾಗಿದೆ ! ಚಿನ್ನ ಗೆದ್ದ ಮರಿಯಪ್ಪನ್ ತಂಗವೇಲು ಮತ್ತು ಕಂಚು ಗೆದ್ದ ವರುಣ್ ಸಿಂಗ್ ಭಾಟಿಯವರಿಗೆ ಅಭಿನಂದನೆಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಒಲಿಂಪಿಯನ್ ಅಭಿನವ್ ಬಿಂದ್ರಾ ಸಹಿತ ಸಹಸ್ರಾರು ಮಂದಿ ಪ್ಯಾರಾಲಿಂಪಿಕ್ ಕ್ರೀಡಾಳುಗಳ ಬೆನ್ನಿಗೆ ನಿಂತರು.
ಕೇಂದ್ರ ಕ್ರೀಡಾ ಇಲಾಖೆ ವತಿಯಿಂದ ಮರಿಯಪ್ಪನ್ ಅವರಿಗೆ 75 ಲಕ್ಷ ರೂಪಾಯಿ ಮತ್ತು ಭಾಟಿ ಅವರಿಗೆ 30 ಲಕ್ಷ ರೂಪಾಯಿ ದೊರಕಲಿದೆ.
ಕ್ರೀಡಾ ಸಚಿವ ವಿಜಯ ಗೋಯಲ್, ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್, ಕ್ರೀಡಾತಾರೆಗಳಾದ ವೀರೇಂದ್ರ ಸೆಹವಾಗ್, ಮೇರಿ ಕೋಮ್ ಅವರೂ ಪ್ಯಾರಾಒಲಿಂಪಿಯನ್ಗಳನ್ನು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.