ನವದೆಹಲಿ : ದೇಶದ ಹೆಮ್ಮೆಯ ಕ್ರೀಡಾಳುಗಳಾದ ಪಿ. ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಮತ್ತು ಜಿತು ರೈ ಅವರಿಗೆ ಪ್ರತಿಷ್ಠಿತ ರಾಜೀವ್ಗಾಂಧಿ ಖೇಲ್ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಖೇಲ್ರತ್ನ ಪ್ರಶಸ್ತಿ 7 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಇದೇ ವೇಳೆ ರಜತ್ ಚೌಹಾಣ್, ಲಲಿತಾ ಬಾಬರ್, ಸೌರವ್ ಕೊಠಾರಿ , ಶಿವ ಥಾಪ, ಅಜಿಂಕ್ಯ ರಹಾನೆ, ಸುಬ್ರತಾ ಪೌಲ್ , ರಾಣಿ, ಆರ್. ರಘುನಾಥ್ , ಗುರುಪ್ರೀತ್ ಸಿಂಗ್, ಅರ್ಪೂ ಚಾಂಡೇಲಾ, ಸೌಮ್ಯಜಿತ್ ಘೋಷ್, ನೇಶ್ ಫೋಗಟ್, ಅುತ್ ಕುಮಾರ್, ಸಂದೀಪ್ ಮನ್, ರೇಂದರ್ ಸಿಂಗ್ ಸೇರಿದಂತೆ ಒಟ್ಟು 18 ಆಟಗಾರರಿಗೆ ಅರ್ಜುನ ಅವಾರ್ಡ್ನ್ನು ನೀಡಿ ಸನ್ಮಾನಿಸಲಾಯಿತು.
6 ಮಂದಿ ವಿವಿಧ ಕ್ರೀಡೆಗಳ ಎನ್. ರಮೇಶ್, ಸಾಗರ್ ಮಲ್ ದಯಾಳ್ , ರಾಜ್ಕುಮಾರ್ ಶರ್ಮಾ, ಬಿಶ್ವೇಶ್ವರ್ ನಂದಿ, ಎಸ್. ಪ್ರದೀಪ್ ಕುಮಾರ್, ಮಹಾಬೀರ್ ಸಿಂಗ್ ಕೋಚ್ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಯಿತು.
ಜೀವನಮಾನದ ಸಾಧನೆಗೆ ಧ್ಯಾನ್ಚಂದ್ ಪ್ರಶಸ್ತಿಯನ್ನು ಸತ್ತಿ ಗೀತಾ, ಸಿಲ್ವಾನಸ್ ಡುಂಗ್ ಡುಂಗ್, ರಾಜೇಂದ್ರ ಪ್ರಹ್ಲಾದ್ ಶೆಲ್ಕೆ ಅವರಿಗೆ ನೀಡಿ ಗೌರವಿಸಲಾಗಿದೆ.
ಹಾಕಿ ದಂತ ಕಥೆ ಮೇಜರ್ ಧ್ಯಾನ್ಚಂದ್ ಅವರ ಜನ್ಮ ದಿನದ ಪ್ರಯುಕ್ತ ಆಗಸ್ಟ್ 29 ರಂದು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದೇ ಕ್ರೀಡಾ ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.