ಮುಂಬೈ : ಮುಂಬೈ ಜನರ ಅತಿ ಮೆಚ್ಚಿನ ತಿಂಡಿ ಎಂಬ ಖ್ಯಾತಿಯ ವಡಾಪಾವ್ ಇದೀಗ ವಿಶ್ವದಾಖಲೆಯನ್ನು ಮಾಡಿದೆ.
ಗುರುಗ್ರಾಮ ಮೂಲದ ರೆಸ್ಟೋರೆಂಟ್ ಒಂದರಲ್ಲಿ 25 ಜನರ ತಂಡ 200 ಕೆ.ಜಿ. ಬಟಾಟೆ ಮತ್ತು ಬ್ರೆಡ್ನ್ನು ಬಳಸಿ 145 ಅಡಿ ಉದ್ದ ವಡಾಪಾವ್ನ್ನು ತಯಾರಿಸಿದೆ.
ವಿಶ್ವ ವಡಾಪಾವ್ ದಿನದ ಅಂಗವಾಗಿ ಇದನ್ನು ತಯಾರು ಮಾಡಲಾಗಿತ್ತು.
ಚೆಫ್ ಅಜಯ್ ಸೂದ್ ಅವರು ತಮ್ಮ ತಂಡದೊಂದಿಗೆ ಇದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿ ತಯಾರಿಸಿದ್ದಾರೆ.
ಇದರ ಸಂಪೂರ್ಣ ವೀಡಿಯೋವನ್ನು ಚಿತ್ರೀಕರಣ ಮಾಡಲಾಗಿದೆ. ಇದನ್ನು ಪರಿಶೀಲನೆಗೆ ಇಡಲಾಗಿದ್ದು, 2018 ರೊಳಗೆ ದಾಖಲೆಯ ಪುಟವನ್ನು ಸೇರಲಿದೆ.
ನುಕ್ಕಡವಾಲಾ ಎಂಬ ಚೈನ್ ರೆಸ್ಟೋರೆಂಟ್ ಈ ಅತಿ ದೊಡ್ಡ ವಡಾಪಾವನ್ನು ತಯಾರಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಇದನ್ನು ನೋಡಲು 2,500 ಮಂದಿ ಆಗಮಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.