ನವದೆಹಲಿ : ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಅವರ ನಂ. 1 ಪಟ್ಟವನ್ನು ಬ್ರೇಕ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯನಾಗಿ ಹೊರಹೊಮ್ಮಿದ್ದಾರೆ.
ಆಗಸ್ಟ್ 25 ರಂದು ಪ್ರಧಾನಿ ಮೋದಿಯವರ ಹಿಂಬಾಲಕರ ಸಂಖ್ಯೆ 22.2 ಮಿಲಿಯನ್ಗೆ ತಲುಪಿದೆ. ಅಮಿತಾಬ್ ಅವರ ಹಿಂಬಾಲಕರ ಸಂಖ್ಯೆ 22 ಮಿಲಿಯನ್ ಇದೆ.
ಜನವರಿಯಲ್ಲಿ ಬಾಲಿವುಡ್ನ ಮತ್ತೋರ್ವ ನಟ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿ ಮೋದಿ ಎರಡನೇ ಸ್ಥಾನಕ್ಕೆ ಬಂದಿದ್ದರು.
ಇದೀಗ 20.9 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಶಾರುಖ್ ಖಾನ್ ಮೂರನೇ ಸ್ಥಾನದಲ್ಲಿದ್ದಾರೆ.
2015 ರಿಂದ ನಿರಂತರವಾಗಿ ಏರಿಕೆ ಕಂಡಿರುವ ಮೋದಿಯವರ ಹಿಂಬಾಲಕರ ಸಂಖ್ಯೆ ಕಳೆದ ಸೆಪ್ಟೆಂಬರ್ 22 ರಂದು 15 ಮಿಲಿಯನ್ ದಾಟಿತ್ತು. ನವೆಂಬರ್ 20 ಕ್ಕೆ 16 ಮಿಲಿಯನ್ಗೆ ಏರಿತ್ತು. ಇದೀಗ ಅದು 22.1 ಮಿಲಿಯನ್ ಆಗಿದೆ.
2016 ರಲ್ಲಿ ಹಿಂಬಾಲಕರ ಸಂಖ್ಯೆ ಏರುಗತಿಯಲ್ಲಿ ಕುಂಠಿತವಾದರೂ 8 ತಿಂಗಳಲ್ಲಿ 5 ಮಿಲಿಯನ್ ಹಿಂಬಾಲಕರನ್ನು ಪಡೆಯುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.
2009 ರಿಂದ ಟ್ವಿಟರ್ನ್ನು ಅತಿ ಸಕ್ರಿಯವಾಗಿ ಬಳಸುತ್ತಿರುವ ಅವರು ಇದೀಗ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬಳಿಕ ಅತಿ ಹೆಚ್ಚು ಟ್ವಿಟರ್ ಹಿಂಬಾಲಕರನ್ನು ಹೊಂದಿರುವ ಜಗತ್ತಿನ ಎರಡನೇ ನಾಯಕ ಎನಿಸಿಕೊಂಡಿದ್ದಾರೆ.
ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ, ಮನ್ ಕಿ ಬಾತ್, ಸೆಲ್ಫಿ ವಿತ್ ಡಾಟರ್ಸ್, ಮುಂತಾದ ಅಭಿಯಾನಗಳ ಪ್ರಚಾರಕ್ಕೂ ಅವರು ಟ್ವಿಟರ್ನ್ನು ಬಳಕೆ ಮಾಡಿ ಜನರಿಗೆ ಹತ್ತಿರವಾಗುತ್ತಿದ್ದಾರೆ.
ಅಲ್ಲದೆ ತನ್ನ ಅಧಿಕಾರಿಗಳಿಗೂ ಹೆಚ್ಚು ಹೆಚ್ಚು ಟ್ವಿಟರ್ ಬಳಸುವಂತೆ ಪ್ರೇರೇಪಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.