ಶ್ರೀನಗರ : ಕಾಶ್ಮೀರದಲ್ಲಿ ಸದ್ಯ ನಡೆಯುತ್ತಿರುವ ಹಿಂಸಾಚಾರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿರುವ ಭದ್ರತಾ ಪಡೆಗಳ ಕೈಯಿಂದ ಕೆಲವರು ಹತ್ಯೆಯಾಗಿರುವುದನ್ನು ಅಲ್ಲಿನ ಸಿಎಂ ಮೆಹಬೂಬಾ ಮುಫ್ತಿ ಅವರು ಸಮರ್ಥಿಸಿಕೊಂಡಿದ್ದಾರೆ.
ಯೋಧರ ಬುಲೆಟ್, ಪೆಲ್ಲೆಟ್ಗಳಿಗೆ ಬಲಿಯಾಗುತ್ತಿರುವವರು ಹಾಲು ಅಥವಾ ಮಿಠಾಯಿಗಳನ್ನು ಖರೀದಿ ಮಾಡಲು ಬಂದವರಾಗಿರಲಿಲ್ಲ ಎನ್ನುವ ಮೂಲಕ ಹತ್ಯೆಯಾದವರು ಮುಗ್ಧರಾಗಿರಲಿಲ್ಲ ಎಂಬುದನ್ನು ಅವರು ತಿಳಿಸಿದ್ದಾರೆ.
ಕೇಂದ್ರ ಗೃಹಸಚಿವ ರಾಜ್ನಾಥ್ ಸಿಂಗ್ ಅವರೊಂದಿಗೆ ಕಾಶ್ಮೀರದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪತ್ರಕರ್ತರ ಕಠಿಣ ಪ್ರಶ್ನೆಗಳಿಗೆ ಕಟುವಾಗಿ ಉತ್ತರಿಸಿದ್ದಾರೆ.
2010 ರ ಕಾಶ್ಮೀರಿ ಹಿಂಸಾಚಾರ ಘಟನೆಗೂ, ಈಗಿನ ಘಟನೆಗೂ ಹೋಲಿಕೆ ಸಲ್ಲದು. 2010 ರಲ್ಲಿ ಮಚಿಲ್ನಲ್ಲಿ ನಕಲಿ ಎನ್ಕೌಂಟರ್ ನಡೆಸಲಾಗಿತ್ತು. ಈಗ 3 ಉಗ್ರರು ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾರೆ. ಇದಕ್ಕೆ ಸರ್ಕಾರವನ್ನು ಹೇಗೆ ದೂಷಣೆ ಮಾಡುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.
15 ವರ್ಷದ ಬಾಲಕ ಆರ್ಮಿ ಕ್ಯಾಂಪ್ಗೆ ಮಿಠಾಯಿ ಖರೀದಿಸಲು ಹೋಗಿದ್ದನೇ ? ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದ ಬಾಲಕ ಅಲ್ಲಿಗೆ ಹಾಲು ಖರೀದಿಸಲು ಹೋಗಿದ್ದನೇ ಎಂದು ಅವರು ಪ್ರಶ್ನಿಸಿದ್ದಾರೆ.
ಅಲ್ಲದೆ ಬಡ ಕಾಶ್ಮೀರಿಗರನ್ನು ಕೆಲ ದುಷ್ಟಶಕ್ತಿಗಳು ತಮ್ಮ ದುಷ್ಕೃತ್ಯಕ್ಕೆ ಬಳಸಿಕೊಳ್ಳುತ್ತಿದೆ. ಹತ್ಯೆಗೀಡಾಗುತ್ತಿರುವ ಶೇ. 95 ರಷ್ಟು ಮಂದಿ ಬಡವರೇ ಆಗಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.