ವಾಷಿಂಗ್ಟನ್ : ಅಮೇರಿಕಾದ ಪೋಸ್ಟಲ್ ಸರ್ವೀಸ್ ಭಾರತದ ದೀಪಾವಳಿ ಹಬ್ಬದ ಬಗೆಗಿನ ಪೋಸ್ಟಲ್ ಸ್ಟಾಂಪ್ ಒಂದನ್ನು ಬಿಡುಗಡೆ ಮಾಡಲಿದೆ.
ಅಕ್ಟೋಬರ್ನಲ್ಲಿ ಈ ಹಿಂದೂ ಹಬ್ಬದ ಸ್ಮರಣಾರ್ಥ ಸ್ಪೆಷಲ್ ದಿವಾಳಿ ಫಾರೆವರ್ ಎಂಬ ಸ್ಟಾಂಪ್ ಬಿಡುಗಡೆಯಾಗಲಿದೆ ಎಂದು ಅಮೇರಿಕಾ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಟೋಬರ್ 5 ರ ಬುಧವಾರದಂದು ಸ್ಟಾಂಪ್ ಬಿಡುಗಡೆಯಾಗಲಿದ್ದು, ನ್ಯೂಯಾರ್ಕ್ನಲ್ಲಿನ ಭಾರತೀಯ ರಾಯಭಾರಿ ಕಛೇರಿಯಲ್ಲಿ ಈ ಸ್ಟಾಂಪ್ನ ಸಮರ್ಪಣಾ ಸಮಾರಂಭ ಏರ್ಪಡಲಿದೆ.
2016 ರ ಅಕ್ಟೋಬರ್ 30 ರಂದು ಹಿಂದುಗಳ ದೀಪದ ಹಬ್ಬ ದೀಪಾವಳಿ ಆರಂಭವಾಗಲಿದೆ.
ಸಾಂಪ್ರದಾಯಿಕ ಹಣತೆ, ಗೋಲ್ಡನ್ ಬ್ಯಾಕ್ಗ್ರೌಂಡ್ನಲ್ಲಿ ಇರುವ ವಿನ್ಯಾಸ ಸ್ಟಾಂಪ್ ಹೊಂದಿದೆ. ಟೆಲ್ಲಿ ಆಯಂಡ್ರಸನ್ ಎಂಬುವವರು ಈ ಫೋಟೋವನ್ನು ಕ್ಲಿಕ್ಕಿಸಿದ್ದಾರೆ.
ಈ ಸ್ಟಾಂಪ್ನ್ನು ಫಾರ್ಎವರ್ ಸ್ಟಾಂಪ್ ಆಗಿ ಬಳಕೆ ಮಾಡಲಾಗುತ್ತದೆ. ಇದು ಫಸ್ಟ್ ಕ್ಲಾಸ್ ಮೈಲ್ ಒನ್ ಔನ್ಸ್ ಮೌಲ್ಯಕ್ಕೆ ಸಮಾನವಾಗಿರುತ್ತದೆ.
ಸಾರ್ವಜನಿಕರಿಂದ ಈ ಸ್ಟಾಂಪ್ ರಚನೆಗೆ ಪೋಸ್ಟಲ್ ಇಲಾಖೆಯು 40 ಸಾವಿರ ಸಲಹೆಗಳನ್ನು ಪಡೆದಿತ್ತು. ಇದರಲ್ಲಿ 25 ಸಲಹೆಗಳನ್ನು ಸ್ಟಾಂಪ್ ಅಡ್ವೈಸರಿ ಕಮಿಟಿ ಆಯ್ಕೆ ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.