ಮುಂಬಯಿ: ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಅಗತ್ಯ ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ವಿದ್ಯುತ್ ಸಂರಕ್ಷಣಾ ನೀತಿಯನ್ನು ಶೀಘ್ರದಲ್ಲೇ ಮಹಾರಾಷ್ಟ್ರ ಸರ್ಕಾರ ಪರಿಚಯಿಸಲಿದೆ.
ಕೇಂದ್ರ ಸರ್ಕಾರದ ವಿದ್ಯುತ್ ಸಂರಕ್ಷಣಾ ನೀತಿ 2001ರ ಅನುಸಾರವಾಗಿ ನೀತಿಯ ಕರಡು ತಯಾರಿಸಲಾಗಿದ್ದು, ಇದನ್ನು ಮಹಾರಾಷ್ಟ್ರ ಸರ್ಕಾರದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದನ್ನು ಬಲಪಡಿಸಲು ತಜ್ಞರ ಶಿಫಾರಸ್ಸುಗಳನ್ನು ಆಮಂತ್ರಿಸಲಾಗಿದೆ ಎಂದು ರಾಜ್ಯದ ವಿದ್ಯುತ್ ಇಲಾಖೆ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಅಭಿವೃದ್ಧಿ ಮತ್ತು ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ವಿದ್ಯುತ್ ಬೇಡಿಕೆ ಏರಿಕೆಯಾಗಿದೆ. ಕೈಗಾರಿಗಳ ಅಭಿವೃದ್ಧಿ ಮತ್ತು ಹೆಚ್ಚಳದಿಂದ ಭವಿಷ್ಯದಲ್ಲಿ ವಿದ್ಯುತ್ ಬೇಡಿಕೆ ಇನ್ನಷ್ಟು ಏರಲಿದೆ. ಕಲ್ಲಿದ್ದಲು, ಇಂಧನ ಮುಂತಾದ ನವೀಕರಿಸಲಾಗದ ಸಂಪನ್ಮೂಲಗಳಿಂದ ವಿದ್ಯುತ್ ತುಯಾರಿಸಲಾಗುತ್ತಿದ್ದು, ಇದು ಮಾಲಿನ್ಯ, ನೈಸರ್ಗಿಕ ಅಸಮತೋಲನ ಹೆಚ್ಚಿಸಿ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅದು ತಿಳಿಸಿದೆ.
ವಿದ್ಯುತ್ ಸಂರಕ್ಷಣಾ ನೀತಿ ಕೇಂದ್ರ ಸರ್ಕಾರದ ೨೦೦೧ ನೀತಿಗೆ ಸಾಕಷ್ಟು ಮೂಲಸೌಕರ್ಯ ಒದಗಿಸಲಿದ್ದು, ನೀತಿ ಅನುಷ್ಠಾನಗೊಂಡಲ್ಲಿ 2020-21ರ ವೇಳೆಗೆ 1000 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಇಲಾಖೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.