ಹೈದರಾಬಾದ್ : ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಾಸ್ಸಾಗಿರುವ ಪಿ.ವಿ.ಸಿಂಧು ಅವರಿಗೆ ಹೈದರಾಬಾದ್ನಲ್ಲಿ ಎಂದೂ ಕಂಡರಿಯದ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ.
ಮುಂಬೈ ಏರ್ಪೋರ್ಟ್ಗೆ ಬಂದಿಳಿದ ಅವರನ್ನು ಡಬ್ಬಲ್ ಡೆಕ್ಕರ್ ಓಪನ್ ಬಸ್ ಮೂಲಕ ಹೈದರಾಬಾದ್ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ರಸ್ತೆ ಇಕ್ಕೆಲಗಳಲ್ಲಿ ನೆರೆದಿದ್ದ ನೂರಾರು ಜನರು ಆಕೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ಹೈದರಾಬಾದ್ನಿಂದ ಜೀಪ್ನ ಮೂಲಕ ಗಚಿಬೌಲಿ ಸ್ಟೇಡಿಯಂಗೆ ಆಗಮಿಸಿದ ಅವರಿಗೆ ಅಲ್ಲಿ ನೆರೆದಿದ್ದ ಸಾವಿರಾರು ಜನರು ಸ್ವಾಗತವನ್ನು ಕೋರಿದರು.
ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿಂಧುವಿಗೆ ದೊರೆತ ಸ್ವಾಗತ ನಿಜಕ್ಕೂ ಅವಿಸ್ಮರಣೀಯವಾಗಿತ್ತು.
ಈ ರೀತಿಯ ಸ್ವಾಗತ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಹೊರತು ಮತ್ಯಾರಿಗೂ ಇದುವರೆಗೆ ದೊರೆತಿರಲಿಲ್ಲ.
ಹೈದರಾಬಾದ್ನ ಸ್ಟೇಡಿಯಂಗೆ ಆಗಮಿಸಿದ ಸಿಂಧು ಅವರಿಗೆ ಹ್ಯಾಂಡ್ಶೇಕ್ ಮಾಡಲು ತಾ ಮುಂದು ತಾ ಮುಂದು ಎಂಬಂತೆ ಜನ ಮುಗಿಬಿದ್ದರು.
ಈ ಪ್ರೀತಿಯ ಮಹಾಪೂರವನ್ನು ಕಂಡು ಸಿಂಧು ಮೂಕವಿಸ್ಮಿತರಾದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರ ಕೋಚ್ ಗೋಪಿಚಂದ್ ವಿಶ್ವದ ಮುಂದೆ ಭಾರತದ ಮುಖ ಉಳಿಸಿದ ಮಹಿಳೆಗೆ ಹ್ಯಾಟ್ಸಾಫ್ ಎಂದಿದ್ದಾರೆ ಅಲ್ಲದೆ ಅದ್ಧೂರಿ ಸ್ವಾಗತ ಸಮಾರಂಭವನ್ನು ಏರ್ಪಡಿಸಿದ ತೆಲಂಗಾಣ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಸಿಂಧು ಅವರಿಗೆ ತೆಲಂಗಾಣ ಸರ್ಕಾರ 5 ಕೋಟಿ ಹಾಗೂ ಆಂಧ್ರ ಸರ್ಕಾರ 3 ಕೋಟಿ ಮತ್ತು ಉದ್ಯೋಗವನ್ನು ನೀಡಲು ಮುಂದಾಗಿದೆ.
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪಿ.ಪಿ. ಸಿಂಧು ಅವರಿಗೆ ದುಬಾರಿ ಬಿಎಂಡಬ್ಲ್ಯು ಕಾರ್ನ್ನು ಉಡುಗೊರೆ ನೀಡಲಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.