ಶ್ರೀನಗರ : ಜಮ್ಮು ಕಾಶ್ಮೀರದ ಸಿಯಾಚಿನ್ ಗ್ಲೇಸಿಯರ್ನಲ್ಲಿ ದೇಶವನ್ನು ಕಾಯುತ್ತಿರುವ ಯೋಧರೊಂದಿಗೆ ಗುರುವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ರಕ್ಷಾಬಂಧನವನ್ನು ಆಚರಿಸಿದರು.
ಈ ಮೂಲಕ ಅಣ್ಣ ತಂಗಿಯರ ಈ ಹಬ್ಬಕ್ಕೆ ಭಾವನಾತ್ಮಕ ಸ್ಪರ್ಶ ನೀಡಿದರು.
ಮಂಜಿನಿಂದ ಆವೃತವಾಗಿರುವ ಸಿಯಾಚಿನ್ಗೆ ವಾಯುಸೇನೆಯ ವಿಶೇಷ ಹೆಲಿಕಾಫ್ಟರ್ನಲ್ಲಿ ಅವರು ತೆರಳಿದ್ದರು.
ಗಡಿಕಾಯುವ ಯೋಧರನ್ನು ತಲುಪಲು ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ವಿಶೇಷ ಅಭಿಯಾನದ ಅಂಗವಾಗಿ ಸ್ಮೃತಿ ಸಿಯಾಚಿನ್ಗೆ ತೆರಳಿದ್ದರು.
20 ಯೋಧರಿಗೆ ಖುದ್ದಾಗಿ ರಕ್ಷೆ ಕಟ್ಟಿದ ಸ್ಮೃತಿ, ಸರ್ವ ಯೋಧರಿಗೂ ಸುದೀರ್ಘ ಮತ್ತು ಸಮೃದ್ಧ ಜೀವನ ಪ್ರಾಪ್ತಿ ಆಗಲಿ ಎಂದು ಹಾರೈಸಿದರು.
ಈ ಬಾರಿಯ ರಕ್ಷಾಬಂಧನವನ್ನು ಅತ್ಯಂತ ಸ್ಮರಣೀಯವಾಗಿಸಲು ಅವರು ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳನ್ನೇ ಯೋಧರಿಗೆ ಹಂಚಿದರು.
ಯೋಧರ ಭೇಟಿಯ ಬಳಿಕ ಮಾತನಾಡಿದ ಸ್ಮೃತಿ, ಯೋಧರ ಋಣಭಾರವನ್ನು ಈ ದೇಶ ಹೊತ್ತುಕೊಂಡಿದೆ. ದೇಶ ಕಾಯುವ ವೀರರೊಂದಿಗೆ ರಕ್ಷಾಬಂಧನವನ್ನು ಆಚರಿಸಿದ್ದು ನನ್ನ ಭಾಗ್ಯ ಎಂದರು.
ಸ್ಮೃತಿ ಮಾತ್ರವಲ್ಲದೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನೀರಾವರಿ ಸಚಿವೆ ಉಮಾ ಭಾರತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಯವರೂ ಗಡಿಗೆ ತೆರಳಿ ಯೋಧರೊಂದಿಗೆ ಸಂವಾದ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.