ಶ್ರೀನಗರ : ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ಮತ್ತು ಜನರ ನಡುವೆ ಪದೇ ಪದೇ ಕಲಹಗಳು ಏರ್ಪಡುತ್ತಿವೆ.
ಕಳೆದ 3 ವಾರಗಳಿಂದ ಜಮ್ಮು ಕಾಶ್ಮೀರ ಹೊತ್ತಿ ಉರಿಯುವಂತೆ ಮಾಡಲು ಕೆಲ ದುಷ್ಟಶಕ್ತಿಗಳು 24 ಕೋಟಿ ರೂ.ಗಳನ್ನು ಹರಿಸಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಗಡಿ ಆಚೆಯಿಂದ ಹಣದ ಹೊಳೆ ಕಾಶ್ಮೀರಕ್ಕೆ ಹರಿದು ಬರುತ್ತಿದ್ದು ಅವುಗಳನ್ನು ಪಾಕ್ ಪರ ಪ್ರತ್ಯೇಕತಾವಾದಿ ಸಂಘಟನೆಗಳಾದ ಜಮಾತ್ -ಇ-ಇಸ್ಮಾಮೀ ಮತ್ತು ದುಕ್ತರಾನ್-ಇ-ಮಿಲ್ಲತ್ಗಳು ಬಳಸಿಕೊಂಡು ಹಿಂಸೆಯನ್ನು ಸೃಷ್ಟಿಸುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ಆರೋಪಿಸಿದ್ದಾರೆ.
ಪ್ರತಿಭಟನೆ ಮತ್ತು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುವ ಕಾಶ್ಮೀರಿ ಯುವಕರಿಗೆ ಈ ಸಂಘಟನೆಗಳು ಹಣವನ್ನು ನೀಡುತ್ತಿದೆ ಎನ್ನಲಾಗಿದೆ.
ಜುಲೈ 8 ರಂದು ಹಿಜ್ಬುಲ್ ಮುಖಂಡ ಬುರ್ಹಾನಿ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ಪಾಕ್ ಪ್ರಾಯೋಜಿತವಾಗಿದ್ದು ಇದಕ್ಕೆ ಆ ದೇಶವೇ ಹಣ ನೀಡುತ್ತಿದೆ. ಅಷ್ಟೇ ಅಲ್ಲದೆ ಬಹಿರಂಗ ಬೆಂಬಲವನ್ನೂ ಪಾಕಿಸ್ಥಾನ ನೀಡಿದೆ. ಇದನ್ನೊಂದು ಸ್ವಾತಂತ್ರ್ಯ ಚಳವಳಿ ಎಂಬಂತೆ ಅದು ಬಿಂಬಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.