ನವದೆಹಲಿ: ನೇಪಾಳದ ಭೀಕರ ಭೂಕಂಪದಲ್ಲಿ ಸತ್ತವರ ಸಂಖ್ಯೆ 3700ಕ್ಕೆ ತಲುಪಿದೆ, ಸಾವಿರಕ್ಕೂ ಅಧಿಕ ಮಂದಿ ಇನ್ನೂ ಪ್ರಾಣಾಪಾಯದಲ್ಲಿ ಸಿಲುಕಿದ್ದಾರೆ. ಅಪಾರ ಸಂಖ್ಯೆಯ ಭಾರತೀಯರು ಕೂಡ ಅಪಾಯದಲ್ಲಿದ್ದಾರೆ. ಇವರೆಲ್ಲರನ್ನೂ ಸುರಕ್ಷಿತವಾಗಿ ಕರೆ ತರಬೇಕಾದ ಮಹತ್ತರವಾದ ಜವಾಬ್ದಾರಿ ಸರ್ಕಾರದ ಮೇಲಿದೆ.
ಆದರೆ ಇಲ್ಲೊಬ್ಬ ಸಮಾಜವಾದಿ ಸಂಸದ ಮಾತ್ರ ನೇಪಾಳದ ಕಠ್ಮಂಡುವಿನಲ್ಲಿ ಸಿಲುಕಿರುವ ತನ್ನ ಪಕ್ಷದ ನಾಯಕ, ಸಂಸದ ನರೇಶ್ ಅಗರ್ವಾಲ್ ಸಂಬಂಧಿಕರನ್ನು ಮೊದಲು ಕರೆ ತನ್ನಿ, ಅವರನ್ನು ಕರೆ ತರಲು ವಿಶೇಷ ವ್ಯವಸ್ಥೆ ಮಾಡಿ ಎಂದು ಸಂಸತ್ತಿನಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
‘ದುರಂತದ ಬಗ್ಗೆ ಸರ್ಕಾರ ಸೂಕ್ಷ್ಮತೆ ಪ್ರದರ್ಶಿಸಿದರೂ, ನೇಪಾಳದಲ್ಲಿರುವ ಭಾರತದ ರಾಯಭಾರ ಕಛೇರಿ ಸೂಕ್ಷ್ಮತೆ ತೋರಿಸುತ್ತಿಲ್ಲ’ ಎಂದಿರುವ ಅವರು, ಅಗರ್ವಾಲ್ ಕುಟುಂಬವನ್ನು ಶೀಘ್ರವಾಗಿ ರಕ್ಷಣೆ ಮಾಡಬೇಕು’ ಎಂದು ಸಂಸದ ರಾಮ್ ಗೋಪಾಲ್ ಯಾದವ್ ಆಗ್ರಹಿಸಿದ್ದಾರೆ.
ಈ ಬಗ್ಗೆ ತಾನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮಾತನಾಡಿದ್ದೇನೆ, ಭಾರತೀಯ ರಾಯಭಾರ ಕಛೇರಿಗೆ ಫೋನಾಯಿಸಿದ್ದೇನೆ ಆದರೆ ನನಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದಿದ್ದಾರೆ.
ನೂರಾರು ಮಂದಿ ಭಾರತೀಯರು ಅಲ್ಲಿ ಸಿಲುಕಿರುವಾಗ ತನ್ನ ಪಕ್ಷದ ಮುಖಂಡ ಕುಟುಂಬವನ್ನು ರಕ್ಷಿಸಲು ವ್ಯವಸ್ಥೆ ಮಾಡುವಂತೆ ಜನಪ್ರತಿನಿಧಿಯೊಬ್ಬ ಸಂಸತ್ತಿನಲ್ಲಿ ಆಗ್ರಹಿಸಿರುವುದು ನಿಜಕ್ಕೂ ಅವರ ನಾಚಿಕೆಗೇಡಿನ ಸಂಗತಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.