ಲಕ್ನೌ : 2017 ರ ಉತ್ತರ ಪ್ರದೇಶ ಚುನಾವಣೆಯು ಎಲ್ಲಾ ಪ್ರಮುಖ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಸಮಾಜವಾದಿ, ಬಿಎಸ್ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದಂತೆ ಕಸರತ್ತು ಆರಂಭಿಸಿದೆ.
ಚುನಾವಣೆಗೆ ಇನ್ನೂ ಸಾಕಷ್ಟು ದಿನಗಳಿದ್ದರೂ ಕೆಲವೊಂದು ಸಮೀಕ್ಷೆಗಳು ರಾಜಕೀಯದ ಗಾಳಿ ಎತ್ತ ಬೀಸುತ್ತಿದೆ ಎಂಬುದನ್ನು ತಿಳಿಸುತ್ತಿದೆ.
ರಾಜ್ಯದ ಅತಿ ಹೆಚ್ಚು ಜನ ಮುಂದಿನ ಸರ್ಕಾರವನ್ನು ಬಿಜೆಪಿ ರಚಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮೀಕ್ಷೆಯ ಪ್ರಕಾರ ಅಖಿಲೇಶ್ ಯಾದವ್ ಅವರೇ ಸಿಎಂ ಸ್ಥಾನಕ್ಕೆ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ.
ಎಬಿಪಿ ನ್ಯೂಸ್ -ಸಿಸಿರೋ ಪೋಲ್ ಜುಲೈ 24 ಮತ್ತು 25 ರಂದು ಯುಪಿಯ 10 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಒಟ್ಟು 1000 ಜನರಿಗೆ ಪ್ರಶ್ನೆಗಳನ್ನು ಕೇಳಿದೆ. ಇದರಲ್ಲಿ ಶೇ. 28 ರಷ್ಟು ಮಂದಿ ಸಿಎಂ ಸ್ಥಾನಕ್ಕೆ ಅಖಿಲೇಶ್ ಯಾದವ್ ನಮ್ಮ ಮೊದಲ ಆಯ್ಕೆ ಎಂದಿದ್ದಾರೆ. ಶೇ. 25 ರಷ್ಟು ಮಂದಿ ಮಾಯಾವತಿ, ಶೇ. 17 ರಷ್ಟು ಮಂದಿ ಯೋಗಿ ಆದಿತ್ಯನಾಥ, ಶೇ. 6 ರಷ್ಟು ಕೇಶವ ಪ್ರಸಾದ್ ಮೌರ್ಯ ಮತ್ತು ಶೇ. 5 ರಷ್ಟು ಮಂದಿ ಶೀಲಾ ದೀಕ್ಷಿತ್ ನಮ್ಮ ಆಯ್ಕೆ ಎಂದಿದ್ದಾರೆ.
ಶೇ. 32 ರಷ್ಟು ಮಂದಿ ಬಿಜೆಪಿ ಮುಂದಿನ ಸರ್ಕಾರ ರಚಿಸಲಿದೆ ಎಂದು ಅಭಿಪ್ರಾಯಿಸಿದ್ದಾರೆ. ಶೇ. 26 ರಷ್ಟು ಮಂದಿ ಸಮಾಜವಾದಿ, ಶೇ. 24 ರಷ್ಟು ಮಂದಿ ಬಿಎಸ್ಪಿ, ಶೇ. 7 ರಷ್ಟು ಮಂದಿ ಕಾಂಗ್ರೆಸ್ ಎಂದಿದ್ದಾರೆ.
ಶೇ. 78 ರಷ್ಟು ಮಂದಿ ರಾಜ್ಯದ ಅಭಿವೃದ್ಧಿಯೇ ಚುನಾವಣೆಯ ಪ್ರಮುಖ ಅಂಶ ಎಂದಿದ್ದಾರೆ. ಶೇ. 7 ರಷ್ಟು ಮಂದಿ ಜಾತಿ, ಶೇ. 5 ರಷ್ಟು ಮಂದಿ ಧರ್ಮ ಎಂದಿದ್ದಾರೆ.
ಪ್ರಿಯಾಂಕಾ ವಾರ್ಧಾ ಅವರಿಗೆ ಶೇ. 19 ರಷ್ಟು ಮಂದಿ ಜೈ ಎಂದರೆ, ಶೇ. 51 ರಷ್ಟು ಮಂದಿ ‘ನೋ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.