ನವದೆಹಲಿ : ರಾಷ್ಟ್ರಪತಿಯಾಗಿ ನಾಲ್ಕು ವರ್ಷ ಪೂರೈಸಿದ ಪ್ರಣಬ್ ಮುಖರ್ಜಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆಗಳ ಮಹಾಪೂರ ಹರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಎರಡನೇ ಹಂತದ ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಅವರು ಪ್ರಣಬ್ ಮುಖರ್ಜಿ ಅವರನ್ನು ತನ್ನ ಪೋಷಕ ಹಾಗೂ ಗುರು ಎಂದು ಕರೆದಿದ್ದಾರೆ.
2 ವರ್ಷದ ಹಿಂದೆ ದೆಹಲಿಗೆ ಹೊಸಬನಾಗಿ ಬಂದಿದ್ದ ನನಗೆ ಪ್ರಣವ್ ಮುಖರ್ಜಿಯವರು ನನಗೆ ಪೋಷಕನಂತೆ ಮಾರ್ಗದರ್ಶನ ಮಾಡಿದರು. ಗುರುವಿನಂತೆ ಕೈ ಬೆರಳು ಹಿಡಿದು ಮುನ್ನಡೆಸಿದರು ಎಂದು ಮೋದಿ ಹೇಳಿಕೊಂಡಿದ್ದಾರೆ.
ತನ್ನ ಸುದೀರ್ಘ ಕಾಲದ ಸಾರ್ವಜನಿಕ ಜೀವನದಲ್ಲಿ ಪ್ರಣಬ್ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರಪತಿ ಭವನವನ್ನು ಜನಸಾಮಾನ್ಯರ ಮತ್ತು ಉನ್ನತ ಅಧಿಕಾರದಲ್ಲಿರುವವರ ನಡುವಿನ ಕೊಂಡಿಯಾಗಿಸಿದ್ದಾರೆ ಎಂದು ಹೇಳಿದರು.
ನನ್ನ ರಾಜಕೀಯ ಹಿನ್ನೆಲೆ ಮತ್ತು ಪ್ರಣಬ್ ಮುಖರ್ಜಿಯವರ ರಾಜಕೀಯ ಹಿನ್ನಲೆ ಬೇರೆ ಬೇರೆಯಾಗಿದೆ. ಆದರೂ ವಿಭಿನ್ನ ರಾಜಕೀಯ ಹಿನ್ನಲೆಯವರು ಪ್ರಜಾಪ್ರಭುತ್ವದಲ್ಲಿ ಹೇಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯಬಹುದು ಎಂಬುದನ್ನು ಪ್ರಣಬ್ ಅವರ ಸನಿಹತೆ ನನಗೆ ಆರ್ಥೈಸಿಕೊಟ್ಟಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.