ನವದೆಹಲಿ : ಮುಂದಿನ 4 ವರ್ಷದಲ್ಲಿ ಕೋಟ್ಯಾಂತರ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶದಿಂದ ಕೇಂದ್ರ ಸಂಪುಟ ಬುಧವಾರ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮೂಲಕ ಕೌಶಲ್ಯ ತರಬೇತಿ ನೀಡಲು ಅನುಮೋದನೆ ನೀಡಿದೆ. ಇದಕ್ಕಾಗಿ 12,000 ಕೋಟಿ ರೂ. ಅನ್ನು ಬಿಡುಗಡೆ ಮಾಡಿದೆ.
ಈ ಯೋಜನೆ 60 ಲಕ್ಷ ಜನರಿಗೆ ಹೊಸ ತರಬೇತಿ ಮತ್ತು ಅನೌಪಚಾರಿಕವಾಗಿ ಈಗಾಗಲೇ ತರಬೇತಿ ಪಡೆದ 40 ಲಕ್ಷ ಜನರಿಗೆ ಸರ್ಟಿಫಿಕೇಟ್ ನೀಡಲಿದೆ.
ಹೊಸ ತರಬೇತಿ ಮತ್ತು ತರಬೇತಿಯ ಸ್ಥಳವನ್ನು ತಮ್ಮ ಆಯ್ಕೆಗೆ ಅನುಗುಣವಾಗಿ ಆರಿಸಿಕೊಳ್ಳಬಹುದು. ಕಾರ್ಯದ ಅವಶ್ಯಕತೆಗಳ ಮೇಲೆ ಇದು ಅವಲಂಬಿತವಾಗಿದೆ.
ಪ್ರಯಾಣ ಭತ್ಯೆ, ಬೋರ್ಡಿಂಗ್, ಲಾಡ್ಜಿಂಗ್ ಖರ್ಚು ವೆಚ್ಚಗಳನ್ನು ಭರಿಸುವ ಮೂಲಕ ತರಬೇತಿ ಪಡೆಯುವವರಿಗೆ ಹಣಕಾಸು ನೆರವು ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.