ಕೋಲ್ಕತ್ತಾ: ಬಿಗಿ ಭದ್ರತೆಯ ನಡುವೆ ಪಶ್ಚಿಮಬಂಗಾಳದ ಒಟ್ಟು 91 ನಗರಪಾಲಿಕೆಗಳಿಗೆ ಶನಿವಾರ ಚುನಾವಣೆ ನಡೆಯುತ್ತಿದೆ. ಒಟ್ಟು 763 ಅಭ್ಯರ್ಥಿಗಳು ಕಣದಲ್ಲಿದ್ದು, 74 ಲಕ್ಷ ಮಂದಿ ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ.
ಚುನಾವಣೆಯ ವೇಳೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇರುವುದರಿಂದ ಕೇಂದ್ರದ 35 ಪಡೆಗಳು, ರಾಜ್ಯ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ, ಈ ನಡುವೆಯೂ ಮತಗಟ್ಟೆಯೊಂದರಲ್ಲಿ ನಡೆದ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಬುರ್ದ್ವಾನ್ ಜಿಲ್ಲೆಯ ಕತ್ವಾದಲ್ಲಿ ಈ ಘಟನೆ ನಡೆದಿದೆ, ಮೃತನನ್ನು ಇಂದ್ರಜಿತ್ ಸಿಂಗ್ ಎಂದು ಗುರುತಿಲಾಗಿದೆ.
ಇನ್ನು ಬಂಕುರ ಜಿಲ್ಲೆಯ ಸೋನಾಮುಖಿಯಲ್ಲಿ 16 ಕಚ್ಚಾ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿಂಸಾಚಾರದ ಮೂಲಕ ಚುನಾವಣೆಯನ್ನು ಗೆಲ್ಲಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಯೋಜಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.