ಕರಾಚಿ: ಪಾಕಿಸ್ಥಾನದ ಮಾನವ ಹಕ್ಕು ಹೋರಾಟಗಾರ್ತಿ ಸಬೀನ ಮಹ್ಮೂದ್ರನ್ನು ಕರಾಚಿಯಲ್ಲಿ ದುಷ್ಕರ್ಮಿಯೊಬ್ಬ ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಭಯೋತ್ಪಾದನ ಪೀಡಿತ ಬಲೂಚಿಸ್ತಾನ ಪ್ರಾಂತ್ಯದ ರಾಜಕೀಯದ ಬಗ್ಗೆ ಅವರು ಚರ್ಚಾ ಕೂಟ ಮತ್ತು ಪ್ರದರ್ಶನ ಏರ್ಪಡಿಸಿದ ಹಿನ್ನಲೆಯಲ್ಲಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರದರ್ಶನ ಏರ್ಪಡಿಸಲಾಗಿದ್ದ ಕರಾಚಿ ರೆಸ್ಟೋರೆಂಟ್ನಿಂದ ಕಾರಿನ ಮೂಲಕ ವಾಪಾಸ್ ತೆರಳುತ್ತಿದ್ದಾಗ ಸಬೀನ ಮಹ್ಮೂದು ಮೇಲೆ ಬೈಕ್ನಲ್ಲಿ ಬಂದ ಆಗಂತುಕ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗುಂಡು ತಗುಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಕಾರಿನಲ್ಲಿದ್ದ ಅವರ ತಾಯಿಗೂ ಗಾಯಗಳಾಗಿವೆ.
‘ಅನ್ಸೈಲೆನ್ಸಿಂಗ್ ಬಲೂಚಿಸ್ತಾನ’ ಎಂಬ ವಿಚಾರ ಸಂಕಿರಣವನ್ನೂ ಅವರು ಏರ್ಪಡಿಸಿದ್ದರು. ಇದು ಉಗ್ರರ ಕೆಂಗಣ್ಣಿಗೆ ಕಾರಣವಾಗಿತ್ತು. ಹೀಗಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಲೂಚಿಸ್ತಾನದಲ್ಲಿ ಉಗ್ರರ ಪ್ರಾಬಲ್ಯವಿದ್ದು, ಅವರು ಹತ್ತಿಕ್ಕಲು ಪೊಲೀಸರು ಮತ್ತು ಸೇನೆ ನಿರಂತರ ಪ್ರಯತ್ನ ಪಡುತ್ತಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.