ಬೆಂಗಳೂರು: ಸಾರ್ವಜನಿಕ ಆರೋಗ್ಯ ವಲಯದ ಆರೋಗ್ಯ ನೀತಿಯಲ್ಲಿ ಒಂದು ಸ್ಪಷ್ಟತೆ, ವೃಕ್ತತೆಯನ್ನು ತರುವ ಉದ್ದೇಶದಿಂದ ಜು.7ರಿಂದ 9ರ ವರೆಗೆ ನಡೆಯಲಿರುವ 3ನೇ ರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ.
ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಚಾಂಸೆರಿ ಪೆವಿಲಿಯನ್ ಹೋಟೆಲ್ನಲ್ಲಿ ನಡೆಯಲಿರುವ ಈ ಸಮ್ಮೇಳದ ವಿಷಯ ‘ಇಕ್ವಿಟೇಬಲ್ ಇಂಡಿಯಾ: ಆಲ್ ಫಾರ್ ಹೆಲ್ತ್ ಎಂಡ್ ವೆಲ್ ಬೀಯಿಂಗ್’ ಇರಲಿದೆ.
ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಬೆಂಗಳೂರು ಹಾಗೂ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್, ಆಂಟ್ವರ್ಪ್ ಜಂಟಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ಕರ್ನಾಟಕ ಸರ್ಕಾರ), ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಭಾರತ ಸರ್ಕಾರ), ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಸಂಶೋಧನಾ ಸಂಸ್ಥೆ (ಭಾರತ ಸರ್ಕಾರ) ಹಾಗೂ ಬಿಕಾಸ್ ಹೆಲ್ತ್ (ಜಾಗತಿಕ ಆರೋಗ್ಯದ ಬೆಲ್ಜಿಯಂ ವೇದಿಕೆ) ಸಹಯೋಗದೊಂದಿಗೆ ಸಮ್ಮೇಳನವನ್ನು ಆಯೊಜಿಸಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ (ಕರ್ನಾಟಕ) ಹಾಗೂ ವಿಶ್ವ ಸಂಸ್ಥೆಯ ಆರೋಗ್ಯ ನೀತಿ ಮತ್ತು ವ್ಯವಸ್ಥೆ ಸಂಶೋಧನೆಯ ಕಾರ್ಯನಿರ್ವಾಹಕ ನರ್ದೇಶಕ ಡಾ. ಅಬ್ದುಲ್ ಗಫರ್, ಡಾ. ಸಂಜೀವ್ ಕುಮಾರ್ (ಎನ್ಎಹ್ಎಸ್ಆರ್ಸಿ, ದೆಹಲಿ), ಡಾ. ಕೆ.ಎನ್. ರವೀಂದ್ರನಾಥ್ (ಉಪಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ) ಹಾಗೂ ಡಾ. ಬಾರ್ಟ್ ಕ್ರಿಯೆಲ್ (ಪ್ರೋಫೆಸರ್, ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್, ಬೆಲ್ಜಿಯಂ) ಇವರ ಉಪಸ್ಥಿತಿಯಲ್ಲಿ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ.
ಭಾರತೀಯ ಆರೋಗ್ಯ ವ್ಯವಸ್ಥೆ ಮತ್ತು ಸುಧಾರಣೆUಳಿಗೆ ನೈಜ ಆಧಾರ ಮತ್ತು ವಿಮರ್ಶಾತ್ಮಕ ವಿಚಾರಗಳ ಚರ್ಚೆಗೆ ಸಂಶೋದಕರು, ವೈದ್ಯರು ಮತ್ತು ನೀತಿ ರಚನೆಕಾರರನ್ನು ಒಂದೇ ಸೂರಿನಡಿ ತರುವುದು ಇದರ ಪ್ರಮುಖ ಉದ್ದೇಶವಾಗಿದೆ.
ಭಾರತದ 11 ರಾಜ್ಯಗಳ 57 ಸಂಶೋಧಕರು ನೀತಿ ರಚನೆಗೆ ಪುರಾವೆಗಳನ್ನು ಒದಗಿಸಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಜಿನಿವಾ) ಹಾಗೂ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್, ಆಂಟ್ವರ್ಪ್ ಇದರ ಅಂತಾರಾಷ್ಟ್ರೀಯ ತಜ್ಞರು ಕೂಡ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.