ವಾಷಿಂಗ್ಟನ್: ಅಘ್ಫಾನಿಸ್ತಾನ-ಪಾಕಿಸ್ಥಾನ ಗಡಿಯಲ್ಲಿ ಜನವರಿಯಲ್ಲಿ ಆಲ್-ಖೈದಾ ಉಗ್ರರನ್ನು ಟಾರ್ಗೆಟ್ ಮಾಡಿ ಅಮೆರಿಕ ಭಯೋತ್ಪಾದನ ವಿರೋಧಿ ಕಾರ್ಯಾಚರಣೆ ನಡೆಸುವ ವೇಳೆ ಆಕಸ್ಮಿಕವಾಗಿ ಅಮೆರಿಕ ಮತ್ತು ಇಟಲಿಯ ಇಬ್ಬರು ಪ್ರಜೆಗಳು ಹತರಾಗಿದ್ದು, ಇವರು ಅಲ್ಖೈದಾದ ಒತ್ತೆಯಾಳುಗಳಾಗಿದ್ದರು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗುರುವಾರ ತಿಳಿಸಿದ್ದಾರೆ.
ಅಲ್ಲದೇ ಒತ್ತೆಯಾಳುಗಳನ್ನು ಹತ್ಯೆ ಮಾಡಿದ ಪ್ರಮಾದಕ್ಕಾಗಿ ಅವರು ಕ್ಷಮೆಯಾಚನೆ ಮಾಡಿದ್ದಾರೆ.
‘ಅಮೆರಿಕಾದ ಭಯೋತ್ಪಾದನ ವಿರೋಧಿ ಕಾರ್ಯಾಚರಣೆಯ ವೇಳೆ ಆಕಸ್ಮಿಕವಾಗಿ ಅಮೆರಿಕ ಪ್ರಜೆ ವಾರೆನ್ ವೇನ್ಸ್ಟೇನ್ ಮತ್ತು ಇಟಲಿಯ ಗಿವೊವನ್ನಿ ಲೋ ಪೋರ್ಟೋ ಎಂಬುವವರು ಹತರಾಗಿದ್ದಾರೆ. ಇವರಿಬ್ಬರು ಪಾಕಿಸ್ಥಾನದಲ್ಲಿ ಚಿಕಿತ್ಸಾ ಕಾರ್ಯವನ್ನು ಮಾಡುತ್ತಿದ್ದರು. ಪಾಕಿಸ್ಥಾನಿಯರ ಬದುಕನ್ನು ಸುಧಾರಿಸಲು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು’ ಎಂದು ಒಬಾಮ ಹೇಳಿದ್ದಾರೆ.
ಅವರ ಅಗಲುವಿಕೆಯ ನಷ್ಟವನ್ನು ವಿವರಿಸಲು ನನ್ನ ಬಳಿ ಶಬ್ದಗಳಿಲ್ಲ, ಅವರ ಕುಟುಂಬಗಳಿಗೆ ಸ್ವಾಂತನ ನೀಡುತ್ತೇನೆ ಎಂದಿದ್ದಾರೆ.
ಅಲ್ಖೈದಾ ಉಗ್ರರು ತಮ್ಮ ಕಾರ್ಯವನ್ನು ಸಾಧಿಸಲು ಇವರಿಬ್ಬರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.