ಶಿಮ್ಲಾ: ಶಿಮ್ಲಾದ ಹೈ ಸೆಕ್ಯೂರಿಟಿ ಝೋನ್ ಛರಬ್ರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಅವರ ನಿವಾಸಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ಶಾಸಕ ಸುರೇಶ್ ಭಾರಧ್ವಜ್ ಮನವಿ ಮಾಡಿಕೊಂಡಿದ್ದಾರೆ.
ರಾಷ್ಟ್ರಪತಿಗಳ ಬೇಸಿಗೆಗಾಲದ ನಿವಾಸದ ಸಮೀಪದಲ್ಲೇ ಈ ಮನೆ ನಿರ್ಮಾಣವಾಗುತ್ತಿದ್ದು, ಮುಂದಿನ ಆರು ವರ್ಷದಲ್ಲಿ ಇದರ ಕಾಮಗಾರಿ ಪೂರ್ಣವಾಗಲಿದೆ.
ಆದರೆ ಈ ಪ್ರದೇಶದಲ್ಲಿ ಮನೆ ನಿರ್ಮಿಸುವುದರಿಂದ ಪ್ರತಿವರ್ಷ ನಡೆಯುವ ಪ್ರೆಸಿಡೆಂಟ್ ರಿಟ್ರೀಟ್ಗೆ ಭದ್ರತೆಯ ತೊಂದರೆಯನ್ನು ಉಂಟು ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿ ಭಾರಧ್ವಜ್ ಕೇಂದ್ರ ಗೃಹಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಸೆಕ್ಯೂರಿಟಿ ಕಾರಣ ಹೊರತುಪಡಿಸಿಯೂ ರಿಟ್ರೀಟ್ ಸಮೀಪ ಅಥವಾ ಕಲ್ಯಾಣಿ ಹೆಲಿಪ್ಯಾಡ್ ಸಮೀಪ ನಿರ್ಮಾಣಕಾರ್ಯ ನಡೆಸುವಂತೆ ಇಲ್ಲ. ಈ ಹಿಂದೆ ಅನೇಕ ಕಟ್ಟಡಗಳಿಗೆ ಇಲ್ಲಿ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.