ಬೆಂಗಳೂರು : ಭಾರತ ನಿರ್ಮಿತ ಏಷ್ಯಾ ತರಬೇತು ಏರ್ಕ್ರಾಫ್ಟ್ ಹಿಂದುಸ್ಥಾನ್ ಟರ್ಬೋ ಟ್ರೈನರ್ 40 ಶುಕ್ರವಾರ ಉದ್ಘಾಟನಾ ಹಾರಾಟವನ್ನು ನಡೆಸಿತು.
ಇಂದು ಬೆಳಗ್ಗೆ 9.15 ಕ್ಕೆ ಬೆಂಗಳೂರಿನಲ್ಲಿ ಹಾರಾಟ ನಡೆಸಲಾಗಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಇದರಲ್ಲಿ ಭಾಗವಹಿಸಿದ್ದರು.
HTT-40 ಏರ್ಕ್ರಾಫ್ಟ್ ಉದ್ಘಾಟನಾ ಹಾರಾಟದ ವಿನ್ಯಾಸ, ಅಭಿವೃದ್ಧಿಯನ್ನು ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಮಾಡಿದೆ.
ಮೂರೂ ಸೇನೆಗಳ ಎಲ್ಲಾ ಪ್ಲೈಯಿಂಗ್ ಕೆಡೆಟ್ಸ್ಗಳಿಗೆ ಮೊದಲ ಸ್ಪೇಸ್ ಟ್ರೈನಿಂಗ್ ನೀಡಲು ಈ ಏರ್ಕ್ರಾಫ್ಟ್ ಬಳಕೆಯಾಗಲಿದೆ.
ಹೆಚ್ಎಎಲ್ನ ಆಂತರಿಕ ಅನುದಾನದಿಂದ HTT-40 ಏರ್ಕ್ರಾಫ್ಟ್ನ ಸಂಪೂರ್ಣ ವಿನ್ಯಾಸವನ್ನು 2013 ರ ಆಗಸ್ಟ್ನಲ್ಲಿ ಪ್ರಾರಂಭ ಮಾಡಲಾಗಿತ್ತು. ಇದು 2015 ರ ಮೇ ತಿಂಗಳಿನಲ್ಲಿ ಪೂರ್ಣಗೊಂಡಿತ್ತು. ಅಲ್ಲಿಂದ ಇದು ಮೊದಲ ಹಾರಾಟವನ್ನು ನಡೆಸಲು 12 ತಿಂಗಳುಗಳನ್ನು ತೆಗೆದುಕೊಂಡಿತು.
2018 ರ ವೇಳೆಗೆ ಇದು ಕಾರ್ಯಾಚರಣೆ ನಡೆಸಲು ಕ್ಲಿಯರೆನ್ಸ್ ಪಡೆಯಲಿದೆ.
ವಾಯುಸೇನೆಯ ಪ್ರಸಕ್ತ ಬೇಡಿಕೆಗೆ ಅನುಗುಣವಾಗಿ ಇದನ್ನು ವಿನ್ಯಾಸ ಮಾಡಲಾಗಿದೆ. HTT-40 ಏರ್ಕ್ರಾಫ್ಟ್ 2800 ಕೆ.ಜಿ. ತೂಕವಿದ್ದು, 950ಎಸ್ ಹೆಚ್ ಪಿ ಕ್ಲಾಸ್ ಟರ್ಬೋ ಪ್ರಾಪ್ ಎಂಜಿನ್ ಹೊಂದಿದೆ.
ವಾಯುಸೇನೆಯ 70 HTT-40 ಏರ್ಕ್ರಾಫ್ಟ್ ಗಳಿಗೆ ಬೇಡಿಕೆಯಿಟ್ಟಿದ್ದು, ಇದನ್ನು ಹೆಚ್ಎಎಲ್ ಶೀಘ್ರದಲ್ಲೇ ಪೂರೈಸಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.