ನವದೆಹಲಿ : ಅಗತ್ಯ ಔಷಧಿಗಳ ಬೆಲೆಯನ್ನು 25% ಇಳಿಸಲು ಸರಕಾರ ತಿಳಿಸಿದೆ. ಎಲ್ಲ ಕಂಪನಿಗಳಿಗೂ ಕಡ್ಡಾಯವಾಗಿ ಪರಿಷ್ಕೃತ ದರವನ್ನು ಜಾರಿಗೊಳಿಸುವಂತೆ ಸೂಚಿಸಲಾಗಿದೆ.
ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ(ಎನ್ಪಿಪಿಎ) ಔಷಧಿಗಳ ಬೆಲೆ ಕಡಿಮೆ ಮಾಡಿದ್ದು, ಕೊಲವೊಂದು “ಔಷಧಿಗಳ ದರದಲ್ಲಿ 10-15 ಶೇ ಕಡಿತಗೊಂಡರೆ ಇನ್ನು ಕೆಲವು ಔಷಧಿಗಳಿಗೆ ಶೇಲಾಗಿದ್ದು, ಈ ಔಷಧಗಳ ಬೆಲೆ ಕಡಿಮೆ ಗೊಳಿಸಿ ಸಾರ್ವಜನಿಕರಿಗೆ ಸಹಾಯ ಮಾಡಿದಂತಾಗಿದೆ.
2016ರ ಔಷಧಗಳ ದರ ನಿಯಂತ್ರಣ ತಿದ್ದುಪಡಿ ಆದೇಶ ಹಾಗೂ 2013ರ ಔಷಧಗಳ ಚಿಲ್ಲರೆ ದರ ನೀತಿ ಅನ್ವಯ ಬೆಲೆ ಪರಿಷ್ಕರಿಸಲಾಗಿದ್ದು,ಕೇಂದ್ರ 680 ಔಷಧಿ ಇದರ ವ್ಯಾಪ್ತಿಗೆ ತಂದಿದ್ದು ನಿಗದಿಗಿಂತ ಹೆಚ್ಚಿನ ದರದಲ್ಲಿ ಔಷಧ ಮಾರಾಟ ಗೊಳಿಸಿದರೆ ಬಡ್ಡಿ ಸಮೇತ ಹಣದ ವಸೂಲಿ ಮಾಡಲಾಗುವುದು ಎಂದು ಪ್ರಾಧಿಕಾರ ಅಧ್ಯಕ್ಷ ಭೂಪೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಈ ಕಾರಣದಿಂದಾಗಿ ಪ್ರಮುಖ ಔಷಧಿ ಉತ್ಪನ್ನ ಸಂಸ್ಥೆಗಳಾದ ಅಬಾಟ್ ಹೆಲ್ತ್ ಕೇರ್, ಸಿಪ್ಲಾ, ಲ್ಯೂಪಿನ್, ಎಲ್ಲಾ ಕಂಪನಿಗಳು ಔಷಧಿಗಳ ದರವನ್ನು ಸರಾಸರಿ ಶೇ. 25 ಕಡಿತ ಮಾಡಲಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.