ಕೋಲ್ಕತ್ತಾ: ಹವಾಮಾನ ವೈಪರೀತ್ಯಗಳು ಹರಪ್ಪ ನಾಗರೀಕತೆ ನಾಶವಾಗಲು ಏಕೈಕ ಕಾರಣವಲ್ಲ ಎಂದು ವಿಜ್ಞಾನಿಗಳು ನೂತನ ಸಂಶೋಧನೆಯನ್ನು ಆಧರಿಸಿ ಹೇಳಿದ್ದಾರೆ. ಮಾನ್ಸೂನ್ ಕೈಕೊಟ್ಟರೂ ಹರಪ್ಪನ್ನರು ತಮ್ಮನ್ನು ತಾವು ಬಿಟ್ಟುಕೊಡಲಿಲ್ಲ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.
ಐಐಟಿ ಖಾನ್ಪುರ, ಇನ್ಸ್ಟಿಟ್ಯೂಟ್ ಆಫ್ ಅರ್ಕಾಲಜಿ, ಡೆಕ್ಕನ್ ಕಾಲೇಜು ಪುಣೆ, ಫಿಜಿಕಲ್ ರಿಸರ್ಚ್ ಲ್ಯಾಬೋರೇಟರಿ, ಪುರಾತತ್ವ ಇಲಾಖೆಯ ತಜ್ಞರ ತಂಡ ನಡೆಸಿದ ಸಂಶೋಧನೆಯಲ್ಲಿ ಹರಪ್ಪನ್ ನಾಗರಿಕತೆ ನಾವು ಭಾವಿಸಿದ್ದಕ್ಕಿಂತಲೂ ಹಳೆಯದು ಎಂದು ತಿಳಿದು ಬಂದಿದೆ. ಸುಮಾರು 8 ಸಾವಿರ ವರ್ಷ ಹಳೆಯದು ಇದಾಗಿರಬಹುದು ಎಂದು ಹೇಳಲಾಗಿದೆ.
ಹವಾಮಾನ ವೈಪರೀತ್ಯ ಹರಪ್ಪನ್ ನಾಗರಿಕತೆ ನಾಶಕ್ಕೆ ಏಕೈಕ ಕಾರಣವಲ್ಲ, ಮನ್ಸೂನ್ ಇಲ್ಲದಿದ್ದಾಗಲು ಅವರು ಕಣ್ಮರೆಯಾಗಿರಲಿಲ್ಲ. ನೀರಿನ ಅವಶ್ಯಕತೆ ಇಲ್ಲದ ಬೆಳೆಗಳನ್ನು ಬೆಳೆದು ಅವರು ಜೀವಿಸಿದ್ದರು. ತಮ್ಮನ್ನು ತಾವು ಬಿಟ್ಟುಕೊಡಲಿಲ್ಲ ಎಂದು ಸಂಶೋಧನೆ ತಿಳಿಸಿದೆ.
ಈ ಸಂಶೋಧನೆಯ ವಿವರಗಳನ್ನು ’ನೇಚರ್ ಸೈನಿಟಿಫಿಕ್ ರಿಪೋರ್ಟ್’ ಜರ್ನಲ್ನಲ್ಲಿ ಮೇ 25 ರಂದು ಪ್ರಕಟಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.