ನವದೆಹಲಿ: ಪಂಜಾಬ್ ಮೇಲೆ ದಾಳಿಗಳನ್ನು ನಡೆಸುವ ಸಲುವಾಗಿ ಕೆನಡಾದಲ್ಲಿ ಖಲಿಸ್ಥಾನ ಪರವಾದ ಉಗ್ರರಿಗೆ ತರಬೇತಿಗಳನ್ನು ನೀಡುವ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿಯನ್ನು ನೀಡಿದೆ.
ಈ ಬಗ್ಗೆ ಗುಪ್ತಚರ ಇಲಾಖೆ ಕೆನಡಾದ ಜಸ್ಟಿನ್ ಟ್ರುಡ್ಯು ಸರ್ಕಾರವನ್ನು ಎಚ್ಚರಿಸಿದ್ದು, ಇಂತಹ ಶೀಬಿರಗಳ ವಿರುದ್ಧ ಕ್ರಮಕೈಗೊಳ್ಳುವಂತೆ ವಿನಂತಿಸಿದೆ.
ಖಲಿಸ್ಥಾನ್ ಭಯೋತ್ಪಾದನಾ ಸಂಘದ ನೂತನ ಮುಖ್ಯಸ್ಥನಾಗಿರುವ ಕೆನಡಾದ ಸಿಖ್ ಆದ ಹರ್ದೀಪ್ ನಿಜ್ಜರ್ ಒಪಂಜಾಬ್ ಮೇಲೆ ದಾಳಿ ನಡೆಸುವ ಸಲುವಾಗಿ ಯುವಕರ ತಂಡವನ್ನು ರಚಿಸಿದ್ದಾನೆ. ಈತ 1995 ರಿಂದ ಕೆನಡಾದಲ್ಲೇ ನೆಲೆಸಿದ್ದು, ಈತನ ಬಂಧನಕ್ಕೆ ಕೋರಿ ಪಂಜಾಬ್ ಸರ್ಕಾರ ಕೇಂದ್ರ ಗೃಹ ಇಲಾಖೆಗೆ ಪತ್ರವನ್ನೂ ಬರೆದಿದೆ.
ಪಾಕಿಸ್ಥಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆದು ಪಂಜಾಬ್ ಮೇಲೆ ದಾಳಿ ನಡೆಸುವ ಹುನ್ನಾರ ಈತನದ್ದು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.