ತಿರುವನಂತಪುರಂ: ಕೇರಳದಲ್ಲಿ ಇತ್ತೀಚಿಗೆ ಪ್ರಕಟವಾದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಶಾಸಕರಲ್ಲಿ ಬರೋಬ್ಬರಿ 61 ಮಂದಿ ಕೋಟ್ಯಾಧಿಪತಿಗಳು. ಮಾತ್ರವಲ್ಲ ಇವರಲ್ಲಿ ಹೆಚ್ಚಿನವರು ಕ್ರಿಮಿನಲ್ ಹಿನ್ನಲೆಯುಳ್ಳವರು ಕೂಡ ಹೌದು.
9 ನೂತನ ಶಾಸಕರು 10 ಕೋಟಿಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಎನ್ಸಿಪಿಯ ಥೋಮಸ್ ಚಾಂಡಿ ಎಂಬ ನೂತನ ಶಾಸಕ ಎಲ್ಲರಿಗಿಂತ ಅಧಿಕ ಅಂದರೆ ಬರೋಬ್ಬರಿ 92.37 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.
ಆರು ಮಂದಿ ಶಾಸಕರಲ್ಲಿ 10ಲಕ್ಷಕ್ಕಿಂತ ಕಡಿಮೆ ಆಸ್ತಿಯಿದೆ. 15 ಸಿಪಿಎಂ, 18 ಐಯುಎಂಎಲ್, 22 ಐಎನ್ಸಿ, 3 ಸ್ವತಂತ್ರ, 19 ಸಿಪಿಐ ಸದಸ್ಯರುಗಳು 1 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ.
ಒಟ್ಟು 140 ಸದಸ್ಯರ ಪೈಕಿ 87 ಸದಸ್ಯರು ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದಾರೆ. 21 ಮಂದಿಯ ಮೇಲೆ ಗಂಭೀರ ಪ್ರಕರಣಗಳಿವೆ. 7 ಮಂದಿಯ ವಿರುದ್ಧ ಕೊಲೆ, ಕೊಲೆ ಯತ್ನ ಆರೋಪಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.