ನವದೆಹಲಿ: ಟ್ಯಾಕ್ಸಿಗಳ ಆನ್ಲೈನ್ ಬುಕಿಂಗ್ನಂತೆ ದೆಹಲಿಯಾದ್ಯಂತ ಸಂಚರಿಸುವ ಬಸ್ಗಳ ಸೀಟ್ಗಳ ಆ್ಯಪ್-ಆಧಾರಿತ ಪ್ರೀಮಿಯಂ ಆನ್ಲೈನ್ ಬುಕಿಂಗ್ ಸೇವೆ ಆರಂಭಿಸುವುದಾಗಿ ದೆಹಲಿ ಸರ್ಕಾರ ಘೋಷಿಸಿದೆ. ಈ ಆನ್ಲೈನ್ ಬುಕಿಂಗ್ ಸೌಲಭ್ಯ ಜೂ.1ರಿಂದ ಆರಂಭವಾಗಲಿದ್ದು ಇದು ಹವಾನಿಯಂತ್ರಿತ ಬಸ್ಗಳಿಗೆ ಮಾತ್ರ ಲಭ್ಯವಾಗಲಿದೆ.
ದೆಹಲಿ ಸಾರಿಗೆ ಸಚಿವ ಗೋಪಾಲ್ ರಾಯ್ ಕಳೆದ ತಿಂಗಳು ಈ ಯೋಜನೆಯನ್ನು ಘೋಷಿಸಿದ್ದು, ಬಸ್ ಸಂಗ್ರಾಹಕರು ಉಬೇರ್, ಓಲ ಆ್ಯಪ್ಗಳಂತೆ ತಮ್ಮದೇ ವೈಯಕ್ತಿಕ ಆ್ಯಪ್ ಹೊಂದಲಿವೆ. ಈ ಮೂಲಕ ತಮ್ಮದೇ ಪ್ರಯಾಣ ದರವನ್ನು ನಿರ್ಧರಿಸಲಿವೆ. ಅಗತ್ಯ ಸಂದರ್ಭಗಳಲ್ಲಿ ಸರ್ಕಾರ ದರಗಳನ್ನು ಬದಲಾವಣೆ ಮಾಡಲಿದೆ ಎಂದು ಹೇಳಿದ್ದಾರೆ.
ಈ ಯೋಜನೆಗೆ ದೆಹಲಿ ಸರ್ಕಾರದೊಂದಿಗೆ ಕೈಜೋಡಿಸುವುದಾಗಿ ಓಲ ಹೇಳಿಕೊಂಡಿದೆ.
ಹೊಸ ನೀತಿಯಂತೆ ಬಸ್ ಸಂಗ್ರಾಹಕರು ತಮ್ಮ ವೆಬ್ಸೈಟ್ನಲ್ಲಿ ಬಸ್ಗಳ ವೇಳಾಪಟ್ಟಿ, ಮಾರ್ಗಗಳನ್ನು ಸೂಚಿಸಲಿದ್ದಾರೆ.
ಈ ಬಸ್ಗಳು 2 ಸಿಸಿಟಿವಿ ಕ್ಯಾಮೆರಾ, ವೈ-ಫೈ ಮತ್ತು ಜಿಪಿಎಸ್ ಸೇವೆ, ಮಹಿಳೆಯರ ಸುರಕ್ಷತೆಗಾಗಿ ಆ್ಯಪ್ನಲ್ಲಿ ಪ್ಯಾನಿಕ್ ಬಟನ್ ವ್ಯವಸ್ಥೆಯನ್ನೂ ಹೊಂದಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.