ತೆಹ್ರಾನ್ : ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನದ ಕಾಲ ಇರಾನ್ ಪ್ರವಾಸದಲ್ಲಿದ್ದು, ಭಾರತ ಮತ್ತು ಇರಾನ್ ನಡುವೆ 12 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಚಬಹಾರ್ ಬಂದರು ನಿರ್ಮಾಣ ಮತ್ತು ಅಭಿವೃದ್ಧಿ 500 ಮಿಲಿಯನ್ ಡಾಲರ್ ಹೂಡಿಕೆ, ವಿಜ್ಞಾನ-ತಂತ್ರಜ್ಞಾನ , ಸಾಂಸ್ಕೃತಿಕ ಕ್ಷೇತ್ರಗಳನ್ನು ಉತ್ತೇಜಿಸುವ ಸಲುವಾಗಿ ಒಪ್ಪಂದ ಸೇರಿದಂತೆ 12 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು 150 ಕೋಟಿ ಸಾಲ ನೀಡಿಲಾಗಿದೆ.
ಈ ಒಪ್ಪಂದದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಇರಾನ್ನ ದೋಸ್ತಿ ಇತಿಹಾಸದಷ್ಟು ಹಳೆಯದ್ದು. ಇದಕ್ಕೆ ಶತಮಾನಗಳ ಇತಿಹಾಸವಿದೆ. ಭಾರತ ಮತ್ತು ಇರಾನ್ ಸಾಮಾಜಿಕವಾಗಿ ಕಲೆ, ವಾಸ್ತುಶಿಲ್ಪ, ಯೋಚನೆ-ಯೋಜನೆ ಮತ್ತು ವ್ಯಾಪಾರ ಮತ್ತು ವ್ಯಾವಹಾರಿಕ ಸಂಬಂಧದಿಂದಾಗಿ ತನ್ನ ಗೆಳೆತನವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.