ಬೆಂಗಳೂರು : ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಆದಾಯ ತೆರಿಗೆದಾರರ ಮೇಲೆ ಸದ್ಯದಲ್ಲೇ ‘ಕಸ ನಿರ್ವಹಣೆ ಸೆಸ್’ ಬರಲಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಕಸ ನಿರ್ವಹಣೆಗೆ ಈಗಾಗಲೇ ಸೆಸ್ ಹಾಕಲಾಗುತ್ತಿದ್ದು, ರಾಜ್ಯದ ಉಳಿದ ಎಲ್ಲಾ 274 ನಗರಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡುವ ಆದಾಯ ತೆರಿಗೆದಾರರ ಮೇಲೆ ಕಸ ನಿರ್ವಹಣೆ ಸೆಸ್ ಬೀಳಲಿದೆ ಎನ್ನಲಾಗಿದೆ.
ಪೌರಾಡಳಿತ ನಿರ್ದೇಶನಾಲಯವು ಸರ್ಕಾರಕ್ಕೆ ಈ ಪ್ರಸ್ತಾಪವನ್ನಿಟ್ಟಿದ್ದು, ಈ ಕುರಿತಂತೆ ಸರ್ಕಾರವು ಕರ್ನಾಟಕ ಮುನ್ಸಿಪಾಲಿಟಿಯು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಒಂದೊಮ್ಮೆ ಕಾಯ್ದೆಗೆ ತಿದ್ದುಪಡಿ ಬಂದರೆ ರಾಜ್ಯದ 274 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೊಳಪಡುವ ಆದಾಯ ತೆರಿಗೆದಾರರು ಕಸ ನಿರ್ವಹಣೆ ಸೆಸ್ ಕಟ್ಟಬೇಕಾಗುತ್ತದೆ.
ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವುದು, ಅವುಗಳನ್ನು ಬೇರ್ಪಡಿಸುವುದು, ಸಂಸ್ಕರಣೆ ಮಾಡುವುದು, ಹೀಗಿ ಕಸ ನಿರ್ವಹಣೆಗೆ ಸಾಕಷ್ಟು ವೆಚ್ಚ ತಗಲುತ್ತಿದ್ದು, ಇದು ಸ್ಥಳೀಯ ಸಂಸ್ಥೆಗಳ ಮೇಲೆ ಹೊರೆಯಾಗುತ್ತಿದೆ. ಈ ಹೊರೆಯನ್ನು ತಗ್ಗಿಸಲು ಸೆಸ್ ವಿಧಿಸುವ ಚಿಂತನೆ ನಡೆಸಲಾಗುತ್ತಿದ್ದು, ಇದು ಸ್ಥಳೀಯ ಸಂಸ್ಥೆಗಳ ಮೇಲಿನ ಹೊರೆಯನ್ನು ತಗ್ಗಿಸಲು ಅಗತ್ಯವಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.