ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 3 ವರ್ಷಗಳು ಕಳೆದಿವೆ. ಈ ಅಧಿಕಾರಾವಧಿಯಲ್ಲಿ ಮಾಡಿದ ಸಾಧನೆಗಿಂತ ವಿವಾದಗಳೇ ಸರ್ಕಾರವನ್ನು ಹೆಚ್ಚು ಸುದ್ದಿಯಲ್ಲಿಟ್ಟಿದೆ.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಲವಾರು ಟೀಕೆ, ಆರೋಪಗಳಿಗೆ ಗುರಿಯಾಗಿದ್ದಾರೆ. ಸ್ವಜನ ಪಕ್ಷಪಾತದಿಂದ ಹಿಡಿದು ದುಬಾರಿ ವಾಚ್ ಪ್ರಕರಣಗಳು ಅವರ ಬೆನ್ನು ಹತ್ತಿವೆ.
ಇದೀಗ ಮರು ವರ್ಷ ಪೂರೈಸಿದ ಬಳಿಕವಾದರೂ ಈ ಎಲ್ಲಾ ವಿವಾದಗಳಿಂದ ದೂರವಿರಲು ಇದೀಗ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದಂತಿದೆ. ಇದಕ್ಕಾಗಿ ತನ್ನ ಅಧಿಕಾರಾವಧಿಯಲ್ಲಿ ಯಾವುದೇ ತರನಾದ ವ್ಯವಹಾರವನ್ನು ನಡೆಸದಂತೆ ಅವರು ತಮ್ಮ ಮಕ್ಕಳಿಗೆ ಸೂಚನೆ ನೀಡಿದ್ದಾರೆ.
ತನ್ನ ಪುತ್ರ ಯತೀಂದ್ರ ಅವರು ನಿರ್ದೇಶಕರಾಗಿರುವ ಮ್ಯಾಟ್ರಿಕ್ಸ್ ಇಮೇಝಿಂಗ್ ಸೊಲ್ಯುಷನ್ ಕಂಪನಿಗೆ ಸರ್ಕಾರ ಟೆಂಡರ್ ನೀಡಿದ್ದು ಭಾರೀ ವಿವಾದವನ್ನು ಸೃಷ್ಟಿ ಮಾಡಿತ್ತು. ಸರ್ಕಾರಕ್ಕೆ ಭಾರೀ ಮುಜುಗರವನ್ನೂ ಉಂಟು ಮಾಡಿತ್ತು. ಸಿಎಂ ವಿರುದ್ಧ ಪ್ರಕರಣವನ್ನೂ ದಾಖಲು ಮಾಡಲಾಗಿತ್ತು.
ಇದೀಗ ಇಂತಹ ವಿವಾದಗಳಿಂದ ದೂರವಿರಲು ಸಿಎಂ ತಮ್ಮ ಮಕ್ಕಳಿಗೆ ತಮ್ಮ ಅಧಿಕಾರ ಅವಧಿಯಲ್ಲಿ ವ್ಯವಹಾರ ನಡೆಸದಂತೆ ಕಟ್ಟಪ್ಪಣೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.