ನವದೆಹಲಿ: ಹಿಂದಿ ದಿವಸ್ನ ಅಂಗವಾಗಿ ಕೊಡಲ್ಪಡುವ ಎರಡು ಮಹತ್ವದ ಪ್ರಶಸ್ತಿಗೆ ಕೇಂದ್ರ ಸರ್ಕಾರ ಮರು ನಾಮಕರಣ ಮಾಡಿದೆ. ಇದರಲ್ಲಿದ್ದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರನ್ನು ತೆಗೆದು ಹಾಕಲಾಗಿದೆ. ಇದು ವಿರೋಧ ಪಕ್ಷ ಕಾಂಗ್ರೆಸ್ನ ಆಕ್ರೋಶಕ್ಕೆ ಕಾರಣವಾಗಿದೆ.
‘ಇಂದಿರಾ ಗಾಂಧಿ ರಾಜಭಾಷಾ ಪುರಸ್ಕಾರ್’ ಮತ್ತು ‘ರಾಜೀವ್ ಗಾಂಧಿ ರಾಷ್ಟ್ರೀಯ ಗ್ಯಾನ್-ವಿಗ್ಯಾನ್ ಮೌಲಿಕ್ ಪುಸ್ತಕ್ ಲೇಖನ್ ಪುರಸ್ಕಾರ್’ ಎಂಬ ಈ ಎರಡು ಪ್ರಶಸ್ತಿಗಳ ಹೆಸರನ್ನು ಮರುನಾಮಕರಣ ಮಾಡಿದೆ.
ಮೊದಲನೇ ಪ್ರಶಸ್ತಿಗೆ ‘ರಾಜಭಾಷಾ ಕೃತಿ ಪುರಸ್ಕಾರ್’ ಮತ್ತು ಎರಡನೇ ಪ್ರಶಸ್ತಿಗೆ ‘ರಾಜಭಾಷ ಗೌರವ್ ಪುರಸ್ಕಾರ್’ ಎಂದು ಹೆಸರಿಡಲಾಗಿದೆ.
ಹಿಂದಿ ಭಾಷೆಯಲ್ಲಿ ಸಾಧನೆಗೈದ ಸಾಧಕರಿಗೆ ಗೃಹಸಚಿವಾಲಯ ಪ್ರತಿವರ್ಷ ‘ಹಿಂದಿ ದಿವಸ್’ನ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತದೆ.
ತನ್ನ ಇಬ್ಬರು ನಾಯಕರ ಹೆಸರನ್ನು ಪ್ರಶಸ್ತಿಯಿಂದ ಕಿತ್ತು ಹಾಕಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದೊಂದು ದ್ವೇಷದ ರಾಜಕೀಯ ಎಂದು ಆರೋಪಿಸಿದೆ.
ಇದಕ್ಕೆ ತಿರುಗೇಟು ನೀಡಿರುವ ಸರ್ಕಾರ ‘ರಾಜಕೀಯ ಪ್ರೇರಿತವಾಗಿ ಹೆಸರು ಬದಲಾಯಿಸಿಲ್ಲ, ಆಡಳಿತಾತ್ಮಕವಾಗಿ ಹೆಸರನ್ನು ಬದಲಾಯಿಸಿದ್ದೇವೆ’ ಎಂದಿದೆ.
ಪ್ರಶಸ್ತಿಗೂ ರಾಜಕೀಯ ನಾಯಕರ ಹೆಸರಿಡುವುದು ಅಸಂಬದ್ಧ ಪದ್ಧತಿಯಾಗಿದ್ದು, ಇದನ್ನು ತೆಗೆದು ಹಾಕಿರುವ ಸರ್ಕಾರದ ಕ್ರಮ ಶ್ಲಾಘನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.