ನವದೆಹಲಿ: ದೇಶದ ಪ್ರಮುಖ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಗೌತಮ್ ಅದಾನಿ ಅವರು ಬ್ಯಾಂಕುಗಳಿಂದ ಪಡೆದ ಸಾಲದ ಮೊತ್ತ ಈ ದೇಶದ ಒಟ್ಟು ರೈತರು ಪಡೆದ ಸಾಲಗಳಿಗೆ ಸಮಾನವಾಗಿದೆ.
ಗೌತಮ್ 72 ಸಾವಿರ ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದ್ದಾರೆ.
ಬೆಳೆ ಬೆಳೆಯಲು ಈ ದೇಶದ ರೈತರು ಮಾಡಿದ ಸಾಲದ ಮೊತ್ತ ಕೂಡ ಅಷ್ಟೇ ಪ್ರಮಾಣದಲ್ಲಿದೆ. ಇದು ವಿಜಯ್ ಮಲ್ಯ ಅವರ ಸಾಲಕ್ಕಿಂತ 4 ಪಟ್ಟು ಹೆಚ್ಚು.
ರಾಜ್ಯಸಭಾ ಕಲಾಪದ ವೇಳೆ ಜೆಡಿಯು ಸದಸ್ಯ ಪವನ್ ವರ್ಮಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಇಡೀ ದೇಶದ ರೈತರ ಸಾಲದಷ್ಟು ಸಾಲವನ್ನು ಒರ್ವ ವ್ಯಕ್ತಿ ಮಾಡಿದ್ದಾನೆ. ಇದರ ಬಗ್ಗೆ ಸರ್ಕಾರ ಯಾವ ಕ್ರಮಕೈಗೊಳ್ಳಲಿದೆ ಎಂದು ಅವರು ಕೇಂದ್ರವನ್ನು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.