ನವದೆಹಲಿ: ಹಲವಾರು ಮಹತ್ವದ ದಾಖಲೆಗಳನ್ನು ಒಳಗೊಂಡ ತನ್ನ ವೆಬ್ಸೈಟ್ನ್ನು ಹ್ಯಾಕ್ ಮಾಡಲಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿರುವ ಸುದ್ದಿಯನ್ನು ಐಆರ್ಸಿಟಿಸಿ ನಿರಾಕರಿಸಿದೆ.
ಬಳಕೆದಾರರ ನೋಂದಾವಣಿ ದಾಖಲೆಗಳು ಕಳವಾಗಿರುವ ಬಗ್ಗೆ ಐಆರ್ಸಿಟಿಸಿಗೆ ಮಹಾರಾಷ್ಟ್ರ ಸೈಬರ್ ಸೆಲ್ ಮಾಹಿತಿ ನೀಡಿತ್ತು. ಈ ಬಗ್ಗೆ ನಾವು ಸಮಿತಿ ರಚಿಸಿ ತನಿಖೆ ನಡೆಸುತ್ತೇವೆ ಎಂದು ಅದು ಹೇಳಿದೆ.
ಇದುವರೆಗೆ ನಾವು ಪರಿಶಿಲಿಸಿದಂತೆ ನಮ್ಮ ಯಾವ ವೆಬ್ಸೈಟ್ಗಳೂ ಹ್ಯಾಕ್ ಆಗಿಲ್ಲ, ದಾಖಲೆಗಳ ಕಳವು ವರದಿಗೆ ಸಂಬಂಧಿಸಿದಂತೆ ಸಮಿತಿ ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಐಆರ್ಸಿಟಿಸಿ ಪಿಆರ್ಓ ಸಂದೀಪ್ ದತ್ತ ಹೇಳಿದ್ದಾರೆ.
ಪತ್ರಿಕೆಗಳ ವರದಿಯ ಪ್ರಕಾರ ಐಆರ್ಸಿಟಿಸಿಯ 1 ಕೋಟಿ ಬಳಕೆದಾರರ ವೈಯಕ್ತಿಕ ದಾಖಲೆಗಳು ಕಳವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.