ಬೆಂಗಳೂರು : ಕೇಂದ್ರ ಸರಕಾರ ವಿದ್ಯಾಂಜಲಿ ಕಾರ್ಯಕ್ರಮದಡಿ ನಿವೃತ್ತ ಶಿಕ್ಷಕರು, ಸೇನಾ ಸಿಬ್ಬಂದಿ, ನಿವೃತ್ತ ಅಧಿಕಾರಿ ಮತ್ತು ಇತರರನ್ನು ಸರಕಾರಿ ಶಾಲೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಉಪಯೋಗಕ್ಕೆ ಪಡೆಯಲು ಮುಂದಾಗಿದೆ.
ಕೇಂದ್ರ ಸರಕಾರ ವಿದ್ಯಾಂಜಲಿ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಕಾರ್ಯಕ್ರಮದನ್ವಯ ನಿವೃತ್ತರ ಸೇವೆಗಳನ್ನು ಪಠ್ಯೇತರ ಚಟುವಟಿಕೆಗಳಿಗೆ ಬಳಸಲು ಯೋಜನೆ ರೂಪಿಸಿದೆ.
ನಿವೃತ್ತ ಶಿಕ್ಷಕರು, ಸರ್ಕಾರಿ ಅಧಿಕಾರಿಗಳು, ಮಾಜಿ ಸೇನಾ ಸಿಬ್ಬಂದಿ, ವೃತ್ತಿಪರರು, ಬೇರೆಡೆಯಿಂದ ವಲಸೆ ಬಂದವರು ಮತ್ತು ಮಹಿಳೆಯರು ಸರ್ಕಾರಿ ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸ್ವಯಂಪ್ರೇರಣೆಯಿಂದ ಮುಂದಾದಲ್ಲಿ ಅವರನ್ನು ನೇಮಕ ಮಾಡಲಾಗುವುದು. ಇವರು ಪ್ರಸ್ತುತ ಇರುವ ಶಿಕ್ಷಕರ ಬದಲಿನವರು ಅಲ್ಲ ಎಂದು ತಿಳಿಸಿದೆ. ಜೀವನ ಕೌಶಲ್ಯ, ಶುಚಿತ್ವ, ಶಾರೀರಿಕ ತರಬೇತಿ, ಆರೋಗ್ಯ, ಕಲೆ ಮೊದಲಾದವುಗಳನ್ನು ನಿವೃತ್ತ ಶಿಕ್ಷಕರು ಹೇಳಿಕೊಡಲಿದ್ದಾರೆ.
ಪರೀಕ್ಷಾರ್ಥವಾಗಿ ಈ ಪ್ರಕ್ರಿಯೆಯನ್ನು ಮೊದಲ ಹಂತದಲ್ಲಿ 9 ರಾಜ್ಯಗಳಲ್ಲಿ ಜಾರಿಗೆ ತರಲಾಗುವುದು ಎಂದು ತಿಳಿದು ಬಂದಿದೆ. ಮುಂದೆ ಬಂದರೆ ಇತರ ನ್ನು ನಡೆಸಲು ಅವರನ್ನು ನೇಮಕ ಮಾಡಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.