ಪೇಶಾವರ: 26/11 ಮುಂಬಯಿ ದಾಳಿಯ ಪ್ರಮುಖ ರುವಾರಿ, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಮತ್ತೆ ಭಾರತದ ವಿರುದ್ಧ ಗುಡುಗಿದ್ದಾನೆ. ಭಾರತವನ್ನು ಪಾಕಿಸ್ಥಾನದ ನಂಬರ್ 1 ಶತ್ರು ಎಂದು ಘೋಷಿಸಿದ್ದಾನೆ.
ಪೇಶವಾರದಲ್ಲಿ ಸಮಾವೇಶವನ್ನು ನಡೆಸಿ ಮಾತನಾಡಿರುವ ಆತ ‘ಭಾರತ ಪಾಕಿಸ್ಥಾನದ ನಂಬರ್ 1 ಶತ್ರು ಮತ್ತು ನಂಬರ್ 1 ಟಾರ್ಗೆಟ್, ಭಾರತದ ವಿರುದ್ಧ ಜಿಹಾದ್ ಮಾಡಬೇಕು’ ಎಂದು ನೆರೆದಿದ್ದವರಿಗೆ ಕರೆ ನೀಡಿದ್ದಾನೆ.
ಕಾಶ್ಮೀರಿಗಳಿಗೆ ಬೆಂಬಲ ನೀಡುವ ಮೂಲಕ ಜಿಹಾದ್ ಮಾಡಲು ಪಾಕ್ ಸೇನೆಗೆ ನಾವು ಬೆಂಬಲ ನೀಡುತ್ತಿದ್ದೇವೆ ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಒಪ್ಪಿಕೊಂಡ ಬಳಿಕ ಆತ ಈ ಹೇಳಿಕೆ ನೀಡಿದ್ದಾನೆ.
ಸಯೀದ್ ಮುಂಬಯಿ ದಾಳಿಯ ಪ್ರಮುಖ ರುವಾರಿ, ಆತನ ವಿರುದ್ಧ ಸಾಕ್ಷ್ಯಧಾರಗಳನ್ನು ಒದಗಿಸಿದರೂ ಪಾಕಿಸ್ಥಾನ ಮಾತ್ರ ಆತನ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಪಾಕಿಸ್ಥಾನದಾದ್ಯಂತ ತಿರುಗಾಡಿ ಭಾರತದ ವಿರುದ್ಧ ಹೇಳಿಕೆ ನೀಡುವುದು, ಆ ಮೂಲಕ ಅಲ್ಲಿನ ಜನರನ್ನು ಭಾರತದ ವಿರುದ್ಧ ಎತ್ತಿಕಟ್ಟುವುದೇ ಈತನ ನಿತ್ಯದ ಕಾಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.