ನವದೆಹಲಿ: ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿಯವರು ಹಾಜಿ ಅಲಿ ದರ್ಗಾವನ್ನು ಪ್ರವೇಶಿಸಲು ಪ್ರಯತ್ನಿಸಿದರೆ ಅವರ ಮೇಲೆ ಮಸಿ ಎರೆಚುವುದಾಗಿ AIMIM ನಾಯಕನೊಬ್ಬ ಬೆದರಿಕೆ ಹಾಕಿದ್ದಾನೆ.
ದೇಸಾಯಿ ಅವರ ಸಂಘಟನೆ ಗುರುವಾರ ದರ್ಗಾ ಪ್ರವೇಶದ ಹೋರಾಟವನ್ನು ಆರಂಭಿಸಿದೆ. ಈ ಹಿನ್ನಲೆಯಲ್ಲಿ ಅಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿ ದರ್ಗಾ ಸುತ್ತಮುತ್ತ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ.
AIMIM ನಾಯಕ ಹಾಜಿ ರಾಫತ್ ಹುಸೈನ್ ದೇಸಾಯಿ ಮೇಲೆ ಮಸಿ ಎರಚುವ ಬೆದರಿಕೆ ಹಾಕಿದ್ದಾನೆ. ಕೆಲ ದಿನಗಳ ಹಿಂದೆಯಷ್ಟೇ ದರ್ಗಾ ಪ್ರವೇಶಿಸಿದರೆ ಚಪ್ಪಲಿಯಲ್ಲಿ ಹೊಡೆಯುವುದಕ್ಕೆ ಶೀವಸೇನೆಯ ಮುಖಂಡ ಅವರಿಗೆ ಬೆದರಿಕೆ ಹಾಕಿದ್ದ.
ಆದರೆ ಎದೆಗುಂದದ ತೃಪ್ತಿ ದೇಸಾಯಿ ’ಹಾಜಿ ಅಲಿ ಸಬ್ ಕೇಲಿಯೇ’ ಎಂಬ ಘೋಷಣೆಯೊಂದಿಗೆ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.