ನವದೆಹಲಿ: ಬ್ರೀಡಿಂಗ್ ಅಥವಾ ಇನ್ನಿತರ ವಾಣಿಜ್ಯ ಕಾರಣಗಳಿಗಾಗಿ ನಾಯಿಗಳನ್ನು ವಿದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವುದಕ್ಕೆ ಸರ್ಕಾರ ನಿಷೇಧ ಹೇರಿದೆ. ಆದರೆ ಆಂತರಿಕ ಭದ್ರತೆಗಾಗಿ ರಕ್ಷಣಾ ಪಡೆಗಳು ಮತ್ತು ಪೊಲೀಸ್ ಇಲಾಖೆ ನಾಯಿಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ.
ಸೂಕ್ತ ದಾಖಲೆಗಳನ್ನು ಹೊಂದಿರುವ ಸಾಕು ನಾಯಿಯನ್ನು ವಿದೇಶದಿಂದ ಕರೆಯತರಬಹುದಾಗಿದೆ, ಸಿಪಿಸಿಎಸ್ಇಎಯ ಶಿಫಾರಸ್ಸಿನ ಮೇರೆಗೆ ಸಂಶೋಧನೆಗಾಗಿ ಆಮದು ಮಾಡಿಕೊಳ್ಳಬಹುದಾಗಿದೆ.
ಆದರೆ ಬ್ರೀಡಿಂಗ್ ಮಾಡಲು, ಇತರ ವಾಣಿಜ್ಯ ಕಾರಣಕ್ಕಾಗಿ ನಾಯಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಪೆಟ್ ಶಾಪ್ಸ್ ಮತ್ತು ಬ್ರಿಡರ್ಸ್ಗಳನ್ನು ನಿಯಂತ್ರಿಸಲು ಈ ಕ್ರಮಕೈಗೊಳ್ಳಲಾಗಿದೆ.
ಹೆಚ್ಚಿನ ನಾಯಿಗಳು ಭಾರತದ ಹವಮಾನಕ್ಕೆ ಹೊಂದಿಕೆ ಆಗುವುದಿಲ್ಲ, ಆದರೂ ಅವುಗಳನ್ನು ಇಲ್ಲಿಗೆ ತಂದು ಸತಾಯಿಸಲಾಗುತ್ತದೆ. ರೋಗಗ್ರಸ್ಥಗೊಂಡರೆ ಬೀದಿಗೆ ತಳ್ಳಲಾಗುತ್ತದೆ. ಬೀದಿಗ ನಾಯಿಗಳು ಕಡೆಗಣನೆಗೆ ಒಳಗಾಗುತ್ತಿದೆ. ಇವೆಲ್ಲವನ್ನು ತಡೆಯಲು ನಾಯಿಗಳ ಆಮದಿನ ಮೇಲೆ ನಿಷೇಧ ಹೇರಿದ್ದು ಒಳ್ಳೆಯ ಕ್ರಮವಾಗಿದೆ. ಸರ್ಕಾರದ ಕ್ರಮವನ್ನು ಪ್ರಾಣಿ ಹಕ್ಕು ಹೋರಾಟಗಾರರು ಸ್ವಾಗತ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.