ನವದೆಹಲಿ: ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಫೆ.9ರಂದು ರಾಷ್ಟ್ರ ವಿರೋಧಿ ಘೋಷಣೆ ಕೂಗಿರುವುದರ ವೀಡಿಯೋಗಳ ಮಾಹಿತಿಗಳನ್ನು ಬದಲಾಯಿಸಿದ್ದಕ್ಕಾಗಿ 3 ಸುದ್ದಿ ವಾಹಿನಿಗಳ ವಿರುದ್ಧ ಪಾಟಿಯಾಲಾ ಕೋರ್ಟ್ ವಿಚಾರಣೆ ನಡೆಸಲಿದೆ.
ಈ ಹಿಂದೆ ಜೆಎನ್ಯುನಲ್ಲಿ ನಡೆದ ವಿವಾದಾತ್ಮಕ ಘಟನೆಯಲ್ಲಿ ’ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆ ಅಥವಾ ಪ್ರಚೋದನಕಾರಿ ಪದಗಳನ್ನು ಬಳಸಲಾಗಿಲ್ಲ. ಇದರ ವೀಡಿಯೋವನ್ನು ತಿರುಚಿಲ್ಲ ಎಂದು ಮ್ಯಾಜಿಸ್ಟ್ರೇಟ್ ವರದಿ ತಿಳಿಸಿತ್ತು.
ಸುದ್ದಿ ವಾಹಿನಿ ವಿರುದ್ಧ ದೆಹಲಿಯ ಎಎಪಿ ಸರ್ಕಾರ ಕೇಸ್ ದಾಖಲಿಸಿದ್ದು, ಜೆಎನ್ಯು ಕ್ಯಾಂಪಸ್ನಲ್ಲಿ ನಡೆದ ಘಟನೆಯ ವಿರುದ್ಧ ನ್ಯಾಯಾಂಗ ತನಿಖೆ ನಡೆಸುವಂತೆ ಎಎಪಿ ಸರ್ಕಾರ ಫೆ.13 ಆದೇಶಿಸಿತ್ತು.
ಇದರ ವೀಡಿಯೋ ಒಂದು ಬಿಡುಗಡೆಗೊಂಡಿದ್ದು, ಕೆಲವು ಮುಸುಕುಧಾರಿ ಯುವಕರು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.