ಲಕ್ನೋ: ರಾಷ್ಟ್ರೀಯ ತನಿಳಾ ದಳದ ಅಧಿಕಾರಿ ತಂಝೀಲ್ ಅಹ್ಮದ್ ಅವರ ಹತ್ಯೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೇ ತಂಝೀಲ್ ಅವರ ಹತ್ಯೆಗೆ ಬಳಸಲಾಗಿದ್ದ ಬೈಕ್ನ್ನೂ ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರ ಹತ್ಯೆಗೆ ವೈಯಕ್ತಿಕ ಕಾರಣಗಳೇ ಪ್ರಮುಖ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ತಂಝೀಲ್ ಅವರ ಸ್ವಗ್ರಾಮ ಬಿಜ್ನೋರ್ನ ಶಶಪುರದಲ್ಲೇ ಹತ್ಯೆಗೆ ತಂತ್ರಗಾರಿಕೆ ಹೆಣೆಯಲಾಗಿತ್ತು ಎಂಬ ಅಂಶ ಕೂಡ ಬಯಲಾಗಿದೆ.
ಪೊಲೀಸರು ಹತ್ಯೆಯ ಬಗೆಗಿನ ಒಂದೊಂದೇ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಸದ್ಯದಲ್ಲೇ ಸತ್ಯ ಬಯಲು ಮಾಡುವ ವಿಶ್ವಾಸದಲ್ಲಿದ್ದಾರೆ.
ಫೈರಿಂಗ್ನಲ್ಲಿ ಸುಟ್ಟು ಹೋಗಿದ್ದ ತಂಝೀಲ್ ಅವರ ಮೊಬೈಲ್ನ ಡಾಟಾವನ್ನು ಸಂಗ್ರಹಿಸಲಾಗಿದ್ದು ಅದರಲ್ಲಿ ಒಂದಿಷ್ಟು ಮಾಹಿತಿಗಳು ಲಭ್ಯವಾಗುವ ಸಾಧ್ಯತೆ ಇದೆ.
ಎನ್ಐಎ ಅಧಿಕಾರಿಯಾಗಿದ್ದ ತಂಝೀಲ್ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದರು. ಹೀಗಾಗಿ ಅವರ ಹತ್ಯೆಯ ಹಿಂದೆ ಉಗ್ರರ ಕೈವಾಡವಿದೆ ಎಂಬ ಶಂಕೆಯೂ ವ್ಯಕ್ತವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.