ನವದೆಹಲಿ: ಬಿಜೆಪಿಯ ಹಿರಿಯ ಧುರೀಣ ಎಲ್ಕೆ ಅಡ್ವಾನಿ ಅವರ ಧರ್ಮಪತ್ನಿ ಕಮಲಾ ಅಡ್ವಾಣಿ ಅವರು ಬುಧವಾರ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಗುರುವಾರ ಸಂಜೆ 4 ಗಂಟೆಗೆ ನೆರವೇರಲಿದೆ.
ಅಂತ್ಯಸಂಸ್ಕಾರಕ್ಕೂ ಮುನ್ನ ಪಾರ್ಥಿವ ಶರೀರದ ಮೆರವಣಿಗೆ ಅಡ್ವಾಣಿ ಅವರ ಪೃಥ್ವೀರಾಜ್ ರೋಡ್ ರೆಸಿಡೆನ್ಸ್ನಿಂದ ಸಂಜೆ 3 ಗಂಟೆಗೆ ಆರಂಭಗೊಳ್ಳಲಿದೆ, ನಿಗಂ ಬೋಧ್ ಘಾಟ್ನಲ್ಲಿ ಅಂತ್ಯಗೊಳ್ಳಲಿದೆ.
ಹೃದಯಾಘಾತದಿಂದಾಗಿ ಕಮಲಾ ಅವರು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಮೃತರಾಗಿದ್ದರು. ಉಸಿರಾಟದ ತೊಂದರೆ ಹಾಗೂ ಅಸ್ವಸ್ಥದ ಪರಿಣಾಮವಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಸೋನಿಯಾ ಗಾಂಧಿ ಕಮಲಾ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
1965ರಲ್ಲಿ ಎಲ್ಕೆ ಅಡ್ವಾಣಿ ಮತ್ತು ಕಮಲಾ ಅವರ ವಿವಾಹ ನೆರವೇರಿತ್ತು, ಜಯಂತ್ ಮತ್ತು ಪ್ರತಿಭಾ ಎಂಬ ಇಬ್ಬರು ಮಕ್ಕಳು ಇವರಿಗಿದ್ದಾರೆ. ಕಳೆದ ವರ್ಷ ಇವರು ತಮ್ಮ ೫೦ನೇ ವಿವಾಹ ಸಮಾರಂಭವನ್ನು ಆಚರಿಸಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.