ನವದೆಹಲಿ: ಜನಪ್ರಿಯ ಐಪಿಎಲ್ ಟೂರ್ನಮೆಂಟ್ನ ಈ ಸೀಸನ್ ನಲ್ಲಿ ವೀಕ್ಷಕರು ಮೂರನೇ ಅಂಪೈರ್ ನಿರ್ಧಾರಗಳನ್ನು ಪ್ರಕಟಿಸುವ ಅವಕಾಶ ಪಡೆಯಲಿದ್ದಾರೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲ ಹೇಳಿದ್ದಾರೆ.
ವೀಕ್ಷಕರಿಗೆ ಫಲಕ (ಪ್ಲೇಕಾರ್ಡ್) ನೀಡಲಾಗುತ್ತಿದ್ದು, ಅವರು ಔಟ್ ಅಥವಾ ನಾಟ್ ಔಟ್- ಏನೇ ಹೇಳಿದರೂ ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ. ಆದರೆ ಮೂರನೇ ಅಂಪೈರ್ನ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ವೀಕ್ಷಕರ ಅಭಿಪ್ರಾಯ ಅಂಪೈರ್ ಮೇಲೆ ಯಾವುದೇ ಪ್ರಭಾವ ಬೀರದು. ಮೂರನೇ ಅಂಪೈರ್ ಟಿವಿ ಸ್ಕ್ರೀನ್ ಮೇಲೆ ತಾವು ಕಂಡ ವೀಡಿಯೋ ಪ್ರಕಾರ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ ಇದರಿಂದ ವೀಕ್ಷಕರು ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ರಾಜೀವ್ ಶುಕ್ಲ ಹೇಳಿದ್ದಾರೆ.
ಬಾಲಿವುಡ್ ತಾರೆಯರಾದ ರಣವೀರ್ ಸಿಂಗ್, ಕತ್ರಿನಾ ಕೈಫ್, ಗಾಯಕ ಯೋ ಯೋ ಹನೀ ಸಿಂಗ್ ಮತ್ತಿತರ ತಾರೆಯರು ಎ. 8 ರಂದು ಮುಂಬಯಿಯ ವರ್ಲಿಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ಶುಕ್ಲ ಅವರು ಈ ವೇಳೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.