ಕಾಬೂಲ್: ಅಫ್ಘಾನಿಸ್ತಾನದಲ್ಲಿ ಶನಿವಾರ ಅವಳಿ ಬಾಂಬ್ ಸ್ಫೋಟ ನಡೆದಿದ್ದು, ಇದರಲ್ಲಿ 37 ಮಂದಿ ಮೃತರಾಗಿದ್ದಾರೆ ಮತ್ತು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಸಿಸ್ ಉಗ್ರರು ಘಟನೆಯ ಹೊಣೆ ಹೊತ್ತುಕೊಂಡಿದ್ದಾರೆ.
ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ಅಫ್ಘಾನಿಸ್ತಾನದ ಆರೋಗ್ಯ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಘಟನೆಯನ್ನು ತಾವೇ ನಡೆಸಿರುವುದಾಗಿ ಆನ್ಲೈನ್ ಮೂಲಕ ಹೇಳಿಕೊಂಡಿರುವ ಇಸಿಸ್ ವಕ್ತಾರ ಶಹಿದುಲ್ಲಾ ಶಹೀದ್, ಇದಕ್ಕಾಗಿ ನಾವು ಸುಸೈಡ್ ಬಾಂಬರ್ ಅಬು ಮೊಹಮ್ಮದ್ ಖುರಸಾನಿ ಎಂಬಾತನನ್ನು ಬಳಸಿಕೊಂಡಿರುವುದಾಗಿ ಹೇಳಿದ್ದಾನೆ.
ತಾಲಿಬಾನಿಗಳು ತಮಗೂ ಈ ಘಟನೆಗೂ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಅಫ್ಘಾನ್ ನೆಲದಲ್ಲಿ ನಡೆದ ಮೊದಲ ಇಸಿಸ್ ಉಗ್ರರ ದಾಳಿ ಇದಾಗಿದ್ದು, ಈ ದಾಳಿಯ ಮೂಲಕ ತನ್ನ ನೆಲೆಯನ್ನು ಇಸಿಸ್ ವಿಸ್ತರಣೆ ಮಾಡಿಕೊಂಡಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.