ಬೆಂಗಳೂರು: ಕಳೆದ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಐಟಿ ವಲಯದಲ್ಲಿ ಶೇ.24 ಉದ್ಯೋಗ ರಚನೆಯೊಂದಿಗೆ ಅತ್ಯಧಿಕ ಉದ್ಯೋಗ ರಚಿಸುವ ರಾಜ್ಯ ಕರ್ನಾಟಕಗಿದೆ ಎಂದು ಉದ್ಯಮ ಸಂಸ್ಥೆ ’ಅಸೋಛಾಮ್’ ವರದಿ ಮಾಡಿದೆ.
ಮಹಾರಾಷ್ಟ್ರ (ಶೇ.23) ಹಾಗೂ ತಮಿಳುನಾಡು (ಶೇ.10.5) ನಂತರದ ಸ್ಥಾನದಲ್ಲಿವೆ ಎಂದು ಅದು ತಿಳಿಸಿದೆ.
ಮಾಹಿತಿ ತಂತ್ರಜ್ಞಾನ (ಐಟಿ) ವಲಯದಲ್ಲಿ ಜನವರಿಯಿಂದ ಮಾರ್ಚ್ 2016ರ ವರೆಗೆ ಒಟ್ಟು 9 ಲಕ್ಷದ ಶೇ.57ರಷ್ಟು, ಸೇವಾ ವಿಭಾಗದಲ್ಲಿ ಶೇ.19 ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಶೇ.11 ಉದ್ಯೋಗ ರಚನೆಯಾಗಿದೆ ಎಂದು ಸಂಸ್ಥೆ ವರದಿ ತಿಳಿಸಿದೆ.
ಬ್ಯಾಂಕಿಂಗ್, ಹಣಕಾಸು ಸೇವೆಗಳು (ಬಿಎಫ್ಎಸ್ಐ) ಕೇವಲ ಶೇ.8, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಶೇ.3.5 ನಂತರದಲ್ಲಿದೆ.
ಕರ್ನಾಟಕ ರಾಜ್ಯದಾದ್ಯಂತ ಐಟಿ-ಇಎಸ್ (ಐಟಿ ಪ್ರೇರಿತ) ಕ್ಷೇತ್ರದಲ್ಲಿ ಶೇ.65, ಸೇವಾ ಕ್ಷೇತ್ರದಲ್ಲಿ ಶೇ. 16, ಉತ್ಪಾದನೆ ಶೇ.8, ಬಿಎಫ್ಎಸ್ಐ ಶೇ.6, ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ವಲಯದಲ್ಲಿ ಶೇ.2.5 ಉದ್ಯೋಗಾವಕಾಶ ಕಲ್ಪಿಸಿದೆ ಎಂದು ವರದಿ ತಿಳಿಸಿದೆ.
ಅಸೋಛಾಮ್ ಆರ್ಥಿಕ ಮತ್ತು ಸಂಶೋಧನಾ ಬ್ಯೂರೋ ವಿವಿಧ ಕಂಪೆನಿಗಳು ನೀಡುತ್ತಿರುವ ಉದ್ಯೋಗಾವಕಾಶ ಜಾಹೀರಾತುಗಳನ್ನು ಆಧರಿಸಿ ಈ ವರದಿ ರೂಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.