ನವದೆಹಲಿ: ಸ್ಥಿರ ಅಭಿವೃದ್ಧಿಗೆ ವಿಶ್ವಸಂಸ್ಥೆ ರೂಪಿಸಿರುವ ಹಲವು ಗುರಿಯನ್ನು ಸಾಧಿಸುವ ಪೂರ್ಣ ಭರವಸೆ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸ್ಥಿರ ಅಭಿವೃದ್ಧಿಯ ಸಂಸದರ ತಂಡದ ಸಂಸದರಾದ ಅಧ್ಯಕ್ಷ ಹರೀಶ್ ಚಂದ್ರ ಮೀನಾ, ರಾಹುಲ್ ಕಾಸ್ವಾನ್ ಹಾಗೂ ನಿನಾಂಗ್ ಎರಿಂಗ್ ಅವರು ಸ್ಥಿರ ಅಭಿವೃದ್ಧಿ ಗುರಿ, ರಾಜ್ಯದ ಶಾಸಕರು ಮತ್ತು ಸಂಸದರಲ್ಲಿ ಅರಿವು ಮೂಡಿಸಿರುವ ಬಗ್ಗೆ ಸಚಿವ ನಾಯ್ಡು ಅವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಿರ ಅಭಿವೃದ್ಧಿಯ ಸಂಸದರ ತಂಡ ಇತರ ಮಧ್ಯಸ್ಥರು ಹಾಗೂ ಶಾಸಕರ ಬೆಂಬಲದೊಂದಿಗೆ ರಾಷ್ಟ್ರೀಯ ಹಾಗೂ ರಾಜ್ಯ ಸರ್ಕಾರಗಳು ಸ್ಥಿರ ಅಭಿವೃದ್ಧಿಗೆ ನಡೆಸುವ ಪ್ರಯತ್ನ ಮತ್ತು ಸಾಧನೆಗಳಿಗೆ ಬೆಂಬಲಿಸಲಿಸುತ್ತಿದೆ.
ನಗರಗಳು, ಮಾನವ ವಸತಿ ಸ್ಥಿರಗೊಳಿಸುವುದು, ಸುರಕ್ಷತೆ, ಬಡತನ ಕೊನೆಗೊಳಿಸುವುದು ಸೇರಿದಂತೆ ವಿಶ್ವ ಸಂಸ್ಥೆಯ ಆರು ಸ್ಥಿರ ಅಭಿವೃದ್ಧಿ ಗುರಿಗಳನ್ನು ೨೦೧೬-೩೦ರ ಒಳಗಾಗಿ ಸಾಧಿಸುವ ಪ್ರಯತ್ನ ನಡೆಸಲಾಗುವುದು ಎಂದು ನಾಯ್ಡು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.