ನವದೆಹಲಿ : ನಿರ್ಮಾಣ ಮಾಡಿದ ಕಟ್ಟವನ್ನು ನೆಲಸಮಗೊಳಿಸುವ ಸಂದರ್ಭ ಅದರಿಂದ ಉಂಟಾಗುವ ತ್ಯಾಜ್ಯ ವಿಲೇವಾರಿಗೆ ಕೇಂದ್ರ ಸರಕಾರ ಹೊಸ ನೀತಿಯೊಂದನ್ನು ಜಾರಿಗೊಳಿಸಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಈ ಹಿಂದೆ ಇಂತಹ ತ್ಯಾಜ್ಯವಿಲೇವಾರಿ ಸಂಬಂಧ ಯಾವೂದೇ ನೀತಿಗಳಲ್ಲಿಲದ ಕಾರಣ ಹೊಸ ನೀತಿಯನ್ನು ರೂಪಿಸಿದೆ. ಕಟ್ಟಡ ನೆಲಸಮ ಗೊಳಿಸಿದ ಬಳಿಕ ಆ ತ್ಯಾಜ್ಯಗಳನ್ನು ಸೂಕ್ತ ನಿರ್ವಹಣೆ ಮಾಡದೆ ಪರಿಸರದಲ್ಲಿ ಎಸೆಯಲಾಗುತ್ತಿತ್ತು. ಆದರೆ ಈಗ ಕೇಂದ್ರ ಸರಕಾರದ ಹೊಸ ನೀತಿಯಿಂದ ಇದಕ್ಕೆ ಮುಕ್ತಿ ದೊರಕಲಿದ್ದು, ಸರಕಾರಕ್ಕೂ ಲಾಭವಾಗಲಿದೆ.
ಕಟ್ಟಡವನ್ನು ನಿರ್ಮಿಸುವ ವೇಳೆ ಬಿಲ್ಡರ್ಗಳು ಅದರ ತ್ಯಾಜ್ಯನಿರ್ವಹಣೆ ವರದಿಯನ್ನು ನೀಡದಿದ್ದರೆ ಅವರಿಗೆ ಪರವಾನಿಗೆಯನ್ನು ನೀಡಲಾಗುವುದಿಲ್ಲ. ಇದಕ್ಕಾಗಿ ಸ್ಥಳೀಯಾಡಳಿತ ಸಂಸ್ಥೆಗಳು ಕೂಡಾ ತ್ಯಾಜ್ಯನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು. ಈ ತ್ಯಾಜ್ಯನಿರ್ವಹಣೆಗೆ ಸ್ಥಳೀಯಾಡಳಿತ ಸಂಸ್ಥೆಯ ಸಹಾಯಪಡೆಯುದಾದರೆ ಅದಕ್ಕೆ ಸೂಕ್ತ ಶುಲ್ಕವನ್ನು ತೆರಬೇಕು.
ಅಲ್ಲದೇ ಕಟ್ಟಡ ನಿರ್ಮಾಣ ಅಥವಾ ನೆಲಸಮಗೊಳಿಸಿದಾಗ ಉಪಯೋಗಿಸಲ್ಪಡುವ ವಸ್ತುಗಳನ್ನು ಸರಕಾರ ಅಥವಾ ಕಟ್ಟಡ ನಿರ್ಮಾಣ ಸಂಸ್ಥೆಗಳು ಬಳಸಬಹುದು ಎಂದು ಅವರು ತಿಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.