ಚಂಡೀಗಢ: ಜಾಟ್ ಹಾಗೂ ಇತರ ಸಮುದಾಯಗಳಿಗೆ ಮೀಸಲಾತಿ ನೀಡುವ ಮಸೂದೆಯನ್ನು ಹರಿಯಾಣ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಆದರೆ ಇತರ ಸಮುದಾಯಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಹರಿಯಾಣ ಹಿಂದುಳಿದ ವರ್ಗಗಳ (ಸೇವೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿನ ಮೀಸಲಾತಿ) ಮಸೂದೆ 2016 ಅನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಜಾರಿಗೊಳಿಸಿದ್ದಾರೆ.
ಹರಿಯಾಣ ರಾಜ್ಯ ಸಚಿವ ಸಂಪುಟ ಪ್ರಬಲ ಜಾಟ್ ಸಮುದಾಯ ಮತ್ತು ನಾಲ್ಕು ಇತರ ಸಮುದಾಯಗಳಾದ ಜಾಟ್ ಸಿಖ್ಖರು, ತ್ಯಾಗಿ, ಬಿಶ್ನೋಯ್, ರಾರ್ ಪ್ರಸ್ತಾಪಿಸಿದ್ದ ಮೀಸಲಾತಿ ಮಸೂದೆಯನ್ನು ಸೋಮವಾರ ಜಾರಿಗೊಳಿಸಿತ್ತು.
ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾಟ್ ಮತ್ತಿತರ ಸಮುದಾಯಗಳಿಗೆ ಮೀಸಲಾತಿ ನೀಡುವ ಭರವಸೆಯನ್ನು ಹರಿಯಾಣ ಸರ್ಕಾರ ಈಡೇರಿಸಿದೆ ಎಂದು ಖತ್ತಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.