ನವದೆಹಲಿ: ಕನಿಷ್ಠ 10 ಇಂಡಿಗೋ ವಿಮಾನಗಳು ಬುಧವಾರ ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದು, ಇದರಿಂದಾಗಿ ಎಲ್ಲಾ ವಿಮಾನಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ.
ದೆಹಲಿ ಏರ್ಪೋರ್ಟ್ ಗೆ ಬಂದಿಳಿದ ಬಳಿಕ ಇಂಡಿಗೋ ವಿಮಾನ 6ಇ 853ಯನ್ನು ಐಸೋಲೇಶನ್ಗೆ ಕರೆದೊಯ್ಯಲಾಗಿದೆ.
ಈ ಏರ್ಲೈನ್ನ ಚೆನ್ನೈ ಕಛೇರಿಗೆ ಕರೆ ಬಂದಿದ್ದು, ಅದರ 10 ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಸಲಾಗಿದೆ. ಕರೆಯನ್ನು ವಿದೇಶದಿಂದ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ನಾಲ್ಕು ದಿನಗಳಿಂದ ಇಂತಹ ನಾಲ್ಕು ಕರೆಗಳನ್ನು ಸ್ವೀಕರಿಸಲಾಗಿದೆ, ಈ ಕರೆಯನ್ನು ಇನ್ನೂ ಹುಸಿ ಕರೆ ಎಂದು ಘೋಷಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.