ಮಂಡ್ಯ : ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವರ ವೈರಮುಡಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ-ರಾಜಮುಡಿ ವಜ್ರ ಖಚಿತವಾದ ಕಿರೀಟಗಳನ್ನು ದೇವಸ್ತಥಾನಕ್ಕೆ ತರಲಾಗಿದೆ.
ಇಂದು ಬೆಳಗ್ಗೆ ಮೇಲುಕೋಟೆಗೆ ಚೆಲುವನಾರಾಯಣ ಸ್ವಾಮಿ ದೇವರ ವೈರಮುಡಿ-ರಾಜಮುಡಿ ವಜ್ರ ಖಚಿತವಾದ ಕಿರೀಟಗಳನ್ನು ಮಂಡ್ಯ ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿಗಳು ಮತ್ತು ಸ್ಥಾನಿಕರು, ಅರ್ಚಕರ ಸಮಕ್ಷಮ ಹೊರತೆಗೆದಿದ್ದು ಅದನ್ನು ಪರಿಶೀಲಿಸಿ , ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು .
ಈ ಕಿರೀಟದ ದರ್ಶನ ಪಡೆಯಲು ಭಕ್ತಾಧಿಗಳು ಆಗಮಿಸಿದ್ದು, ದೇವರ ಕೀಟದ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿತ್ತು. ಪರಿಸ್ಥಿಯನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಕಿರೀಟವನ್ನು ಬಿಗಿ ಭದ್ರತೆಯಲ್ಲಿ ದೇವಸ್ಥಾನಕ್ಕೆ ತರಲಾಗುತ್ತಿದೆ.
ಮಾ.19 ರಿಂದ ಮಾ 26 ರ ವರೆಗೆ ವೈರಮುಡಿ ಉತ್ಸವ ನಂತರ ರಾಜಮುಡಿ ಉತ್ಸವ ಮತ್ತು ಜಾತ್ರಾ ಮಹೋತ್ಸವ ನೆರವೇರಲಿದೆ. ಈ ಸಂದರ್ಭ ಗರುಢಾರೂಢನಾದ ಶ್ರೀ ಮೇಲುಕೋಟೆ ಚಲುವ ನಾರಾಯಣ ಸ್ವಾಮಿಗೆ ವೈರಮುಡಿ ಕಿರೀಟ ಧರಿಸಿ ಉತ್ಸವವು ನೆರವೇರಲಿದಡ. ಈ ಉತ್ಸವದ ಬಳಿಕ ರಾಜಮುಡಿ ಉತ್ಸವವು ನೆರವೇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.