ಭುವನೇಶ್ವರ್: ಸದಾ ಶಸ್ತ್ರಾಸ್ತ್ರ ಹಿಡಿದು ಅರಣ್ಯಗಳಲ್ಲಿ, ಕುಗ್ರಾಮಗಳಲ್ಲಿ ನೆಲೆಸಿ ಆಡಳಿತ ವ್ಯವಸ್ಥೆ ವಿರುದ್ಧ ಯುದ್ಧ ಸಾರುತ್ತಿದ್ದ ನಕ್ಸಲರಲ್ಲಿ ಕೆಲವರು ತಮ್ಮ ಮನಸ್ಸನ್ನು ಪರಿವರ್ತನೆಗೊಳಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದಾರೆ.
ಭಾನುವಾರ ಒರಿಸ್ಸಾದ ಮಲ್ಕನ್ಗಿರಿ ಜಿಲ್ಲೆಯಲ್ಲಿ 25 ಮಹಿಳೆಯರು ಸೇರಿದಂತೆ ಒಟ್ಟು 57 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಎಲ್ಲರೂ ಮಲ್ಕನ್ಗಿರಿಯ ತಮುಡ ಗ್ರಾಮದವರಾಗಿದ್ದಾರೆ.
ಇವರು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋಯಿಸ್ಟ್ನ ಕಲಿಮೆಲ ದಲಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ರಾಜ್ಯ ಸರ್ಕಾರ ನಕ್ಸಲ್ ಪುನರ್ವಸತಿ ಯಜನೆಯಡಿ ಶರಣಾಗತರಾಗಿದ್ದಾರೆ.
7 ದಿನಗಳಲ್ಲಿ ಒಟ್ಟು 315 ನಕ್ಸಲರು ಶಸ್ತ್ರಾಸ್ತ್ರಗಳನ್ನು ತೊರೆದು ಶರಣಾಗಿದ್ದಾರೆ ಎಂದು ಮಲ್ಕನ್ಗಿರಿ ಎಸ್ಪಿ ಮಿತ್ರಬಾನು ಮಹಾಪತ್ರ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.