ನವದೆಹಲಿ: ಯೂರೋಪ್ನ ವಿಮಾನ ತಯಾರಕ ಕಂಪೆನಿ ಏರ್ಬಸ್ ತಯಾರಿಸಿದ ಮೊದಲ ಪರಿಸರ ಸ್ನೇಹಿ ವಿಮಾನ A320 Neo ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಏರ್ಬಸ್ ಈ ವಿಮಾನವನ್ನು ಭಾರತದ ಇಂಡಿಗೋ ಕಂಪೆನಿಗೆ ಹಸ್ತಾಂತರಿಸಿದೆ.
ಇಂಡಿಗೋ ವಿಮಾನಯಾನ ಸಂಸ್ಥೆ ಏರ್ಬಸ್ ಕಂಪೆನಿಯಿಂದ ಆಧುನಿಕ ವಿಮಾನ ಪಡೆದ ಏಷ್ಯಾದ ಮೊದಲ ವಿಮಾನಯಾಯಾನ ಕಂಪೆನಿಯಾಗಿದೆ.
ಈ ವಿಮಾನ ಏರ್ಬಸ್ನ ಇತರ ವಿಮಾನಗಳಿಗಿಂತ ಶೇ.15 ಅಧಿಕ ಇಂಧನ ಸಾಮರ್ಥ್ಯ ಹೊಂದಿದೆ ಎಂದು ಏರ್ಬಸ್ ತಿಳಿಸಿದೆ. ಇಂಡಿಗೋ ವಿಮಾನಯಾನವು ಮೂರು ಹಂತಗಳಲ್ಲಿ ಸುಮಾರು 530 ವಿಮಾನಗಳನ್ನು ಖರೀದಿಸಿದ ಏರ್ಬಸ್ನ ಮೊದಲ ಗ್ರಾಹಕ ಸಂಸ್ಥೆಯಾಗಿದೆ ಎಂದು ಏರ್ಬಸ್ ತಿಳಿಸಿದೆ.
ಈ ವಿಮಾನ ಆಧುನಿಕ ಇಂಜಿನ್ನೊಂದಿಗೆ ಶಾರ್ಕ್ಲೆಟ್ ರೆಕ್ಕೆಗಳನ್ನು ಹೊಂದಿದ್ದು, ಶೇ.15ರಷ್ಟು ಇಂಧನ ಉಳಿತಾಯವಾಗುತ್ತದೆ. ಈ ವಮಾನ ವಾರ್ಷಿಕ ಸುಮಾರು 5000 ಟನ್ಗಳಷ್ಟು ಹೊಗೆ ಸೂಸುವಿಕೆಯನ್ನು ಕಡಿತಗೊಳಿಸುತ್ತದೆ ಎಂದು ಏರ್ಬಸ್ ಕಂಪೆನಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.